ಲೋಕಲ್ ಸುದ್ದಿ

ಅಂತರಾಷ್ಟ್ರೀಯ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ದಾವಣಗೆರೆಯಲ್ಲಿ ಆರಂಭ

ಅಂತರಾಷ್ಟ್ರೀಯ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ದಾವಣಗೆರೆಯಲ್ಲಿ ಆರಂಭ

ದಾವಣಗೆರೆ: ಅಮೇರಿಕಾದ ಖ್ಯಾತ ವಿಜ್ಞಾನಿ ಡಾಕ್ಟರ್ ಹಾರ್ವರ್ಡ್ ಗಾರ್ಡ್ನರ್ ಅವರ ಮಲ್ಟಿಪಲ್ ಇಂಟಲಿಜೆನ್ಸ್- ಮಕ್ಕಳಲ್ಲಿರುವ 8 ಬುದ್ಧಿವಂತಿಕೆಗಳನ್ನು ಉತ್ತಮಗೊಳಿಸುವ ಹಾಗೂ ಮಕ್ಕಳ ಕಲಿಕೆಯನ್ನು ಪರಿಣಾಮಕಾರಿ ಗೊಳಿಸುವ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ನ ಶಾಖೆ ದಾವಣಗೆರೆಯಲ್ಲಿ ಇಂದು ಆರಂಭವಾಯಿತು.

2013 ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿ ಹಲವಾರು ಶಾಖೆಗಳನ್ನು ಹೊಂದಿರುವ ಮಲ್ಟಿಪಲ್ ಇಂಟಲಿಜೆನ್ಸ್ ಆಧಾರಿತ ಪ್ರಿ ಸ್ಕೂಲ್ ಇದಾಗಿದ್ದು ವಿಭಿನ್ನವಾದ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಹಾಗೂ  ಅವರ ಮುಂದಿನ ಜೀವನಕ್ಕೆ ಭದ್ರ ತಳಹದಿಯನ್ನು ಹಾಕಲಿದೆ. ಪುಟಾಣಿಗಳಾದ ಯದುವೀರ್ ,ಮನ್ವಿತಾ ಬಿ.ಎಮ್ ಹಾಗೂ ಹನುಪ್ ಪಾಟೀಲ್ ಗಿಡ ನೆಡುವುದರ ಮೂಲಕ ಶಾಲೆಯ ಉದ್ಘಾಟನೆಯನ್ನು ಮಾಡಿದ್ದು ವಿಶೇಷವಾಗಿತ್ತು.

ಅಂತರಾಷ್ಟ್ರೀಯ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ದಾವಣಗೆರೆಯಲ್ಲಿ ಆರಂಭ

ಮಕ್ಕಳು ಸುಲಲಿತವಾಗಿ ಇಂಗ್ಲಿಷ್ ಮಾತನಾಡಲು ಸಹಾಯ ಮಾಡುವ ಫೋನಿಕ್ಸ್ ಹಾಗೂ ಸ್ಪೋಕನ್ ಇಂಗ್ಲಿಷ್ ಅನ್ನು ಈ ಶಾಲೆಯಲ್ಲಿ ಕಲಿಸಿಕೊಡಲಾಗುತ್ತದೆ. ಹಾಗೆಯೇ ಭಾರತೀಯ ಸಂಸ್ಕೃತಿಯನ್ನು ಮತ್ತು ನಮ್ಮ ಜನಪದ ಬೇರುಗಳನ್ನು ಮಕ್ಕಳಿಗೆ ವಿವಿಧ ಚಟುವಟಿಕೆಗಳ ಮುಖಾಂತರ ತಿಳಿಸಲಾಗುತ್ತದೆ.

ಅಂತರಾಷ್ಟ್ರೀಯ ಪರಿಕಲ್ಪನೆಯ ಎಂ.ಐ ವಿಂಗ್ಸ್ ಪ್ರಿ ಸ್ಕೂಲ್ ದಾವಣಗೆರೆಯಲ್ಲಿ ಆರಂಭ

ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಬೇರೆಯವರೊಂದಿಗೆ ಸುಲಭವಾಗಿ ಬೆರೆಯಲು ಪ್ರೇರೇಪಿಸುವ ಹಲವಾರು ಚಟುವಟಿಕೆಗಳೊಂದಿಗೆ ಪುಟಾಣಿಗಳು ತಮ್ಮ ಶಿಕ್ಷಣದ ಮೊದಲ ಹೆಜ್ಜೆಯನ್ನು ಎಂ.ಐ ವಿಂಗ್ಸ್  ನಲ್ಲಿ ಇಡಲಿದ್ದಾರೆ. ಶಿಕ್ಷಕಿಯರಾದ ರೇಖಾಶ್ರೀ, ಅಂಬ್ರೀನ್ ಹಾಗೂ ಆಡಳಿತ ಮಂಡಳಿಯ ಶ್ರೀಮತಿ ದೀಪಾ ರಾವ್ ಮತ್ತು ವೆಂಕಟೇಶ್ ಬಿಟಿ ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು ಪುಟಾಣಿಗಳ ಕನಸಿನ ರೆಕ್ಕೆಗಳಿಗೆ ಬಣ್ಣ ಹಚ್ಚಿ ಜೀವನವೆಂಬ ಆಕಾಶದಲ್ಲಿ ಮನಸ್ಸು ಬಿಚ್ಚಿ ಹಾರಲು ಎಮ್.ಐ ವಿಂಗ್ಸ್ ಹೊಸ ದಾರಿಯನ್ನು ಕಲ್ಪಿಸಿ ಕೊಡಲಿದೆ. ಎರಡರಿಂದ ಆರು ವರ್ಷದ ಪುಟಾಣಿಗಳಿಗೆ ಪ್ರವೇಶಾವಕಾಶವಿದ್ದು ಆಸಕ್ತ ಪೋಷಕರು 9731875515 ನಲ್ಲಿ ಶಾಲೆಯನ್ನು ಸಂಪರ್ಕಿಸಬಹುದು.

Click to comment

Leave a Reply

Your email address will not be published. Required fields are marked *

Most Popular

To Top