ಉಚ್ಚoಗೆಮ್ಮ ದೇವಸ್ಥಾನ ದಲ್ಲಿ ಸೀರೆ ಹಾಗೂ ಹಿತ್ತಾಳೆ ಸಾಮಗ್ರಿಗಳ ಹರಾಜು

ವಿಜಯನಗರ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಜೂನ್ 14 ರಂದು ಬೆಳೆಗ್ಗೆ 11 ಘಂಟೆಗೆ ಉಚ್ಚoಗೆಮ್ಮ ದೇವಸ್ಥಾನ ದಲ್ಲಿ ಹರಕೆ ರೂಪದಲ್ಲಿ ಸಲ್ಲಿಸಿದ ವಿವಿಧ ಗುಣಮಟ್ಟದ ಸೀರೆಗಳು ಮತ್ತು ಹಿತ್ತಾಳೆ ಸಾಮಗ್ರಿಗಳ ಹರಾಜು ನಡೆಯಲಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರೂ ಹಾಗೂ ಶ್ರೀ ಉತ್ಸವಾಂಬ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮಸ್ಥರ ಸಮ್ಮುಖದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರೂ 50,000 ರೂ.ಠೇವಣಿಯನ್ನ ದೇವಸ್ಥಾನದ ಕಚೇರಿಯಲ್ಲಿ ಹರಾಜು ಪ್ರಕ್ರಿಯೆ ಪ್ರಾರಂಭವಾಗುವ ಮುಂಚೆ ಕಟ್ಟಬೇಕು,ಹರಾಜಿನಲ್ಲಿ ಪಡೆದ ಸಾಮಗ್ರಿಗಳಿಗೆ ಆ ದಿನವೇ ಹಣವನ್ನು ಪಾವತಿಸಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಚ್ ಮಲ್ಲಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!