ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಕೆ : ಲಕ್ಷ್ಮಿ ಹೆಬ್ಬಾಳ್ಕರ್.

ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಕೆ : ಲಕ್ಷ್ಮಿ ಹೆಬ್ಬಾಳ್ಕರ್.

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ನಾಳೆಯಿಂದ ಜಾರಿಗೆ ಬರಲಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.  ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.

ಯಾವುದೇ ಕೊನೆಯ ದಿನಾಂಕವೂ ಇರುವುದಿಲ್ಲ. ಯಾರಾದರೂ ಅರ್ಜಿ ಸಲ್ಲಿಸಲು ಶುಲ್ಕ ಪಡೆದಲ್ಲಿ , ಮತ್ತು ಗೊಂದಲಗಳ ನಿವಾರಣೆಗೆ  ಸಹಾಯವಾಣಿ 1902 ಕ್ಕೆ ಕರೆ ಮಾಡಬಹುದು.

ನಾಳೆ ಮಧ್ಯಾಹ್ನ 1.30 ರ ನಂತರ ಅರ್ಜಿ ಸಲ್ಲಿಸಬಹುದಾಗಿದೆ.  ಆನ್ ಲೈನ್ ಅರ್ಜಿಯನ್ನು ಗ್ರಾಮ ಒನ್ ಮತ್ತು ಬೆಂಗಳೂರು ಒನ್  ಸೇವಾಸಿಂಧು , ಕರ್ನಾಟಕ ಒನ್ಗಳ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

ನೇರವಾಗಿ ಮನೆಯ ಯಜಮಾನಿಯ ಖಾತೆಗೆ ಹಣ 2000 ರೂ. ಜಮಾ ಆಗುತ್ತದೆ. ಯಜಮಾನಿಯ ಮತ್ತು ಪತಿಯ ಆಧಾರ್ ಕಡ್ಡಾಯ. ‘ಕುಟುಂಬದ ಅಭಿವೃದ್ಧಿ : ಸಮಾಜದ ಅಭಿವೃದ್ಧಿ’ .

ಮಹಿಳೆಯರ ಸಮಗ್ರ ಆರ್ಥಿಕ ಅಭಿವೃದ್ಧಿ ಈ ಯೋಜನೆಯ ಮುಖ್ಯ ಗುರಿ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಬೆಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!