“ಬಡವರು ಬಡವರಾಗಿಯೆ ಉಳಿಯಬೇಕೆ.?” ಸಿಟಿಜನ್ಸ್ ಪ್ರಶ್ನೆ, ಸರ್ಕಾರದ ಗ್ಯಾರಂಟಿ ಕಾರ್ಡ್ ನ ಮೊದಲ ದೂರು.!

ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಪ್ರತಿಭಟನೆ: ಎನ್.ರವಿಕುಮಾರ್

ಬೆಂಗಳೂರು: ಮಹತ್ವಾಕಾಂಕ್ಷೆಯ ಗ್ಯಾರಂಟಿ ಕಾರ್ಡ್ ಅವಾಂತರ ಕುರಿತಂತೆ ಮೊದಲ ದೂರು ದಾಖಲಾಗಿದೆ. ಈ ಗ್ಯಾರಂಟಿ ಭರವಸೆಗಳ ಪೈಕಿ ‘ಗೃಹ ಜ್ಯೋತಿ’ ಉಳ್ಳವರಿಗೆ ಮಾತ್ರವೇ, ಬಡವರು ಬಡವರಾಗಿಯೇ ಉಳಿಯಬೇಕೆ? ಎಂಬ ಆಕ್ರೋಶ ಪ್ರತಿಧ್ವನಿಸಿದೆ‌. ಈ ಕುರಿತು ಸಿಎಂ, ಡಿಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿರುವ ‘ಸಿಟಿಜನ್ಸ್ ದೂರು’ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಚುನಾವಣಾ ಪೂರ್ವದಲ್ಲಿ ಜನತೆಗೆ ಭರವಸೆ ನೀಡಿರುವ ‘ಐದು ಗ್ಯಾರಂಟಿ’ ಯೋಜನೆಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ಮುನ್ನುಡಿ ಬರೆದಿದೆ. ಆದರೆ ಷರತ್ತುಗಳ ವಿಚಾರದಿಂದಾಗಿ ಗೊಂದಲ ಉಂಟಾಗಿದೆ. ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಕುರಿತ ಆದೇಶವು ‘ಬಡವರು ಬಡವರಾಗಿಯೇ ಉಳಿಯಬೇಕೇ’?ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಷರತ್ತುಗಳನ್ನು ಪರಿಷ್ಕರಿಸಬೇಕು, ಹಿಂದೆ ನೀಡಿರುವ ಭರವಸೆಯಂತೆಯೇ ಬಡವರೆಲ್ಲರಿಗೂ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಈ ಸಂಘಟನೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ಏನಿದು ಅವಾಂತರ?

“ಗೃಹ ಜ್ಯೋತಿ” ಯೋಜನೆಯಡಿ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಕುರಿತಂತೆ ಸರ್ಕಾರದ ನಡಾವಳಿಗಳು ಪ್ರಕಟವಾಗಿದ್ದು, ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಟ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿ ನಿಗದಿ ಮಾಡಲಾಗಿದೆ. ಪ್ರತಿ ಗ್ರಾಹಕರು 2022-23ರಲ್ಲಿ ಬಳಕೆ ಮಾಡಿರುವ ಮಾಸಿಕ ಸರಾಸರಿ ಯೂನಿಟ್‌’ಗಳ ಮೇಲೆ ಶೇಕಡಾ 10ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ನಿಗದಿಪಡಿಸಲಾಗಿದೆ. ಗರಿಷ್ಟ ಮಿತಿಯನ್ನು ಮೀರಿದರೆ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ’ ಎಂಬ ಷರತ್ತು ಇದೆ. ಈ ‘ಸರಾಸರಿ ಸೂತ್ರವೇ’ ಗೊಂದಲಕ್ಕೆ ಕಾರಣವಾಗಿರುವುದು.

ಅನೇಕ ಸಂದರ್ಭಗಳಲ್ಲಿ ಈ ‘ಸರಾಸರಿ ಸೂತ್ರ’ವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂಬ ಸಾಮಾಜಿಕ ಹೋರಾಟಗಾರರ ಅಭಿಪ್ರಾಯಗಳನ್ನಾಧರಿಸಿ ಈ ದೂರು ಸಲ್ಲಿಕೆಯಾಗಿದೆ. ಈ ಹಿಂದೆ ಜಿಂದಾಲ್ ಭೂಚಕ್ರ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿ ಕರ್ಮಕಾಂಡ, ಹೀಗೆ ಹತ್ತಾರು ವಿಚಾರಗಳಲ್ಲಿ ಪರಿಪೂರ್ಣ ಕಾನೂನು ಹೋರಾಟ ನಡೆಸಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಸ್ಥ ಕೆ.ಎ.ಪಾಲ್ ಅವರು ಹಲವಾರು ಮಾರ್ಮಿಕ ಪ್ರಶ್ನೆಗಳನ್ನು ಈ ದೂರಿನ ಮೂಲಕ ಸಿದ್ದರಾಮಯ್ಯ ಸರ್ಕಾರದ ಮುಂದಿಟ್ಟಿರುವ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.

‘ಗೃಹಜ್ಯೋತಿ’ ಜಾರಿಗಾಗಿ ವಿಧಿಸಿರುವ ಷರತ್ತುಗಳು ಜನರ ಒಳಿತಿಗಾಗಿಯೇ ಅಥವಾ ಕೊಡುಗೆ ಜನಸಾಮಾನ್ಯರಿಗೆ ತಲುಪಬಾರದೆಂಬ ಉದ್ದೇಶಕ್ಜಾಗಿಯೇ? ಎಂಬ ಅನುಮಾನಗಳನ್ನು ವ್ಯಕ್ತಪಡಿಸಿರುವ ‘ಸಿಟಿಜನ್ಸ್’ ದೂರು, ಹಲವಾರು ಪ್ರಶ್ನೆಗಳತ್ತ ಬೊಟ್ಟು ಮಾಡಿದೆ.

ಪ್ರಮುಖಸಿಟಿಜನ್ಸ್ಪ್ರಶ್ನೆಗಳು ಹೀಗಿವೆ:

‘ವಿದ್ಯುತ್ ಉಳಿಸಿ’ ಎಂಬ ಸರ್ಕಾರದ ಸಂದೇಶವನ್ನು ಪಾಲಿಸಿರುವ ಅವೆಷ್ಟೋ ಕುಟುಂಬಗಳು ವಿದ್ಯುತ್ ಮಿತಬಳಕೆಗೆ ಆದ್ಯತೆ ನೀಡಿವೆ. ಅವರು ಯೋಜನೆಯ ಪೂರ್ಣ ಲಾಭ ಪಡೆಯಲು ಅರ್ಹರಲ್ಲವೇ?

ಬಹುತೇಕ ಬಡ ಕುಟುಂಬಗಳು ಕರೆಂಟ್ ಹೊರೆಯಿಂದ ತಪ್ಪಿಸಿಕೊಳ್ಳಲು ರೆಫ್ರಿಜೆರೇಟರ್, ಫ್ಯಾನ್, ಟಿವಿ, ಗೀಸರ್ ಮೊದಲಾದ ಗೃಹೋಪಯೋಗಿ ವಸ್ತುಗಳನ್ನು ಹೊಂದಿಲ್ಲ. ಆ ಬಡ ಕುಟುಂಬಗಳಿಗೆ ಅಂತಹ ವಸ್ತುಗಳ ಬಳಕೆ ಮುಂದೆಯೂ ಗಗನ ಕುಸುಮವೇ?

ನಿವೃತ್ತ ನೌಕರರು, ವಯೋವೃದ್ಧರು ವರ್ಷದಲ್ಲಿ ಬಹುಪಾಲು ಸಮಯವನ್ನು ಮಕ್ಕಳ ಜೊತೆ ಪರ ಊರು ಅಥವಾ ವಿದೇಶಗಳಲ್ಲಿ ಕಳೆಯುವುದುಂಟು. ಚಿಕ್ಕ ಕುಟುಂಬದ ಸ್ತ್ರೀ ಹೆರಿಗೆ ಸಂದರ್ಭದಲ್ಲಿ ಐದಾರು ತಿಂಗಳು ತವರು ಮನೆಗೆ/ತವರೂರಿಗೆ ತೆರಳುವುದೂ ಉಂಟು. ಆ ವೇಳೆ, ಇಡೀ ಕುಟುಂಬ ತಾತ್ಕಾಲಿಕವಾಗಿ ತಮ್ಮ ಮನೆಯಿಂದ ದೂರ ಉಳಿಯುವ ಅನಿವಾರ್ಯತೆಯೂ ಸೃಷ್ಟಿಯಾಗುವುದುಂಟು. ಅಂಥವರಿಗೆ ಈ ‘ಸರಾಸರಿ ಸೂತ್ರ’ದಿಂದ ಅನ್ಯಾಯವಾಗುವುದಿಲ್ಲವೇ?

ಬಾಡಿಗೆ ಮನೆಗಳಲ್ಲಿ ವಾಸವಿರುವ ಮಂದಿ ಬಾಡಿಗೆ ಕರಾರು ಮುಗಿದ ಬಳಿಕ ಮನೆ ಬದಲಾವಣೆ ಮಾಡುವುದು ಅನಿವಾರ್ಯ. ಅಂತಹ ಸನ್ನಿವೇಶಗಳಲ್ಲಿ ಯಾವ ಮನೆಯ ವಿದ್ಯುತ್ ಬಳಕೆಯನ್ನು ಪರಿಗಣಿಸಲಾಗುತ್ತದೆ? ಎಂಬ ‘ಸಿಟಿಜನ್’ ಪ್ರಶ್ನೆಗಳು ಇದೀಗ ಸಿದ್ದರಾಮಯ್ಯರ‌ ಮುಂದಿದೆ.

ಆಶ್ವಾಸನೆಯೇ ಬೇರೆ; ಆದೇಶವೇ ಬೇರೆ..!

ಚುನಾವಣೆಗೆ ಮುನ್ನ ‘ಗ್ಯಾರೆಂಟಿ’ ಭರವಸೆ ಘೋಷಿಸಿದ್ದ ಕಾಂಗ್ರೆಸ್ ನಾಯಕರು, ‘ಗೃಹ ಜ್ಯೋತಿ’ಯು ಎಲ್ಲರಿಗೂ ಉಚಿತ ಎಂದಿದ್ದರು. ಆದರೆ ಇದೀಗ ಜಾರಿಗೊಳಿಸಬೇಕಾದ ಸಂದರ್ಭದಲ್ಲಿ ಹಣಕಾಸು ಹೊಂದಾಣಿಕೆ ಕಷ್ಟಸಾಧ್ಯ ಎಂಬುದನ್ನು ಅರಿತು, ಫಲಾನುಭವಿಗಳಿಗೆ ಷರತ್ತುಗಳನ್ನು ವಿಧಿಸಲಾಗಿದೆ. ಇದನ್ನು ಗಮನಿಸಿದರೆ ಈ ಯೋಜನೆ ‘ಉಳ್ಳವರಿಗೆ ವರದಾನವೇ ಹೊರತು, ಬಡವರಿಗಾಗಿ ಅಲ್ಲ’ ಎಂಬಂತಿದೆ ಎಂಬುದು ‘ಸಿಟಿಜನ್ಸ್’ ಪ್ರತಿಧ್ವನಿ.

ಪ್ರಸಕ್ತ ವ್ಯವಸ್ಥೆಯಲ್ಲಿ ವಿದ್ಯುತ್ ಮೀಟರ್’ಗಳು ಮನೆ ಮಾಲೀಕರ ಹೆಸರಿನಲ್ಲಿ ಇರುತ್ತದೆಯೇ ಹೊರತು ಬಾಡಿಗೆದಾರರ ಹೆಸರಿನಲ್ಲಿ ಅಲ್ಲ. ಒಂದೇ ಕಟ್ಟಡದಲ್ಲಿ ಐದಾರು ಮನೆಗಳಿದ್ದರೆ ಅಷ್ಟೂ ಮನೆಗಳ ವಿದ್ಯುತ್ ಸಂಪರ್ಕ ಮಾಲೀಕರ ಹೆಸರಿನಲ್ಲೇ ಇರುತ್ತದೆ. ಸರ್ಕಾರದ ಷರತ್ತುಗಳು ಮೀಟರ್ ಮಾಲಿಕರಿಗೆ ಅನ್ವಯವಾಗುವುದೇ ಆದಲ್ಲಿ, ಒಂದು ಮನೆಗಷ್ಟೇ ‘ಗೃಹಜ್ಯೋತಿ’ಯೇ? ಅಥವಾ ಬಾಡಿಗೆದಾರರಿಗೂ ಸಿಗುತ್ತದೆಯೇ? ಎಂದು ಕೆ.ಎ.ಪಾಲ್ ಅವರು ಸರ್ಕಾರವನ್ನು ಕೇಳಿದ್ದಾರೆ.

ಈ ಸಿಟಿಜನ್ ಪ್ರಶ್ನೆಗಳೇ ಸಿದ್ದು ಸರ್ಕಾರಕ್ಕೆ ಈಗ ಸವಾಲಾಗಿರುವುದು. ಈ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ನೀಡಿರುವ ‘ಗ್ಯಾರೆಂಟಿ’ ಭರವಸೆ ಪೈಕಿ ‘ಗೃಹ ಜ್ಯೋತಿ’ ಸಾರ್ವತ್ರಿಕ ಉಚಿತ ಎಂಬಂತಿತ್ತು. ಆದರೆ ಇದೀಗ ಆ ಯೋಜನೆ ಜಾರಿಯ ಸಂದರ್ಭದಲ್ಲಿ ‘ಮನೆಗೊಂದು ನೀತಿ’ ಎಂಬಂತಾಗಿದೆ. ‘ಸರಾಸರಿ ಸೂತ್ರ’ ಅನುಸರಿಸಬೇಕೆಂಬ ಸರ್ಕಾರದ ಆದೇಶ ಕೂಡಾ, ‘ತಾರತಮ್ಯ’ ನೀತಿಗೆ ಸಾಕ್ಷಿಯಾದಂತಿದೆ ಎಂದು ಆದೇಶದಲ್ಲಿನ ಲೋಪಗಳ ಬಗ್ಗೆ ಬೊಟ್ಟು ಮಾಡಿರುವ ಕೆ.ಎ.ಪಾಲ್, ಹಿಂದಿನ ವರ್ಷದಲ್ಲಿ ಬೇಕಾಬಿಟ್ಟಿ ವಿದ್ಯುತ್ ಬಳಕೆ ಮಾಡಿರುವ ಶ್ರೀಮಂತರು ಇದೀಗ ಈ ‘ಸರಾಸರಿ ಸೂತ್ರ’ದಿಂದಾಗಿ ಸದರಿ ಯೋಜನೆಯ ಪರಿಪೂರ್ಣ ಫಲಾನುಭವಿಗಳಾಗುತ್ತಾರೆಯೇ ಹೊರತು, ಈವರೆಗೂ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದ ಬಡವರು ಯೋಜನೆಯ ಪರಿಪೂರ್ಣ ಪ್ರಯೋಜನದಿಂದ ವಂಚಿತರಾಗುತ್ತಾರೆ. ಅಷ್ಟೇ ಅಲ್ಲ ‘ಆರ್ಥಿಕ ಸಬಲೀಕರಣ’ ಸೂತ್ರಕ್ಕೆ ವಿರುದ್ಧವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಎಲ್ಲರಿಗೂ ಸಮಾನ’ ಸೂತ್ರದಡಿ ‘ಗೃಹ ಜ್ಯೋತಿ’ ಅನುಷ್ಠಾನ ಗೊಳಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.


ಆಶ್ವಾಸನೆಯೇ ಬೇರೆ; ಆದೇಶವೇ ಬೇರೆ..! ‘ಸಿಟಿಜನ್ಸ್ ರೈಟ್ಸ್ ಫೌಂಡೇಷನ್’ ಕೆ.ಎ.ಪಾಲ್ ಪ್ರತಿಧ್ವನಿ.

ಈ ಸಿಟಿಜನ್ ಪ್ರಶ್ನೆಗಳೇ ಸಿದ್ದು ಸರ್ಕಾರಕ್ಕೆ ಈಗ ಸವಾಲಾಗಿರುವುದು. ಈ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ನೀಡಿರುವ ‘ಗ್ಯಾರೆಂಟಿ’ ಭರವಸೆ ಪೈಕಿ ‘ಗೃಹ ಜ್ಯೋತಿ’ ಸಾರ್ವತ್ರಿಕ ಉಚಿತ ಎಂಬಂತಿತ್ತು. ಆದರೆ ಇದೀಗ ಆ ಯೋಜನೆ ಜಾರಿಯ ಸಂದರ್ಭದಲ್ಲಿ ‘ಮನೆಗೊಂದು ನೀತಿ’ ಎಂಬಂತಾಗಿದೆ. ‘ಸರಾಸರಿ ಸೂತ್ರ’ ಅನುಸರಿಸಬೇಕೆಂಬ ಸರ್ಕಾರದ ಆದೇಶ ಕೂಡಾ, ‘ತಾರತಮ್ಯ’ ನೀತಿಗೆ ಸಾಕ್ಷಿಯಾದಂತಿದೆ ಎಂದು ಆದೇಶದಲ್ಲಿನ ಲೋಪಗಳ ಬಗ್ಗೆ ಬೊಟ್ಟು ಮಾಡಿರುವ ಕೆ.ಎ.ಪಾಲ್, ಹಿಂದಿನ ವರ್ಷದಲ್ಲಿ ಬೇಕಾಬಿಟ್ಟಿ ವಿದ್ಯುತ್ ಬಳಕೆ ಮಾಡಿರುವ ಶ್ರೀಮಂತರು ಇದೀಗ ಈ ‘ಸರಾಸರಿ ಸೂತ್ರ’ದಿಂದಾಗಿ ಸದರಿ ಯೋಜನೆಯ ಪರಿಪೂರ್ಣ ಫಲಾನುಭವಿಗಳಾಗುತ್ತಾರೆಯೇ ಹೊರತು, ಈವರೆಗೂ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದ ಬಡವರು ಯೋಜನೆಯ ಪರಿಪೂರ್ಣ ಪ್ರಯೋಜನದಿಂದ ವಂಚಿತರಾಗುತ್ತಾರೆ. ಅಷ್ಟೇ ಅಲ್ಲ ‘ಆರ್ಥಿಕ ಸಬಲೀಕರಣ’ ಸೂತ್ರಕ್ಕೆ ವಿರುದ್ಧವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಎಲ್ಲರಿಗೂ ಸಮಾನ’ ಸೂತ್ರದಡಿ ‘ಗೃಹ ಜ್ಯೋತಿ’ ಅನುಷ್ಠಾನ ಗೊಳಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!