ದಾವಣಗೆರೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯದ ಚುನಾವಣೆ

ದಾವಣಗೆರೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯದ ಚುನಾವಣೆ

ದಾವಣಗೆರೆ : ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೇ ಕೇವಲ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ರಾಜ್ಯಾಧ್ಯಕ್ಷ ಷಡಕ್ಷರಿ ಒಪ್ಪಿಗೆ ಮೇರೆಗೆ ಪ್ರಭಾರ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಹಲವು ದಿನಗಳು ಕಳೆದರೂ ಚುನಾವಣೆ ಆಗಿಲ್ಲ..ಅಲ್ದೇ ವಿಧಾನ ಸಭಾ ಚುನಾವಣೆ ಬಂದ ಕಾರಣ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಚುನಾವಣೆ ಬಂದು ಸರಕಾರ ರಚನೆಯಾದರೂ ಇನ್ನೂ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ನಿಲ್ಲಬೇಕಾದವರು ಈಗ ಹಲ್ಲು ಕಚ್ಚಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯಾಧ್ಯಕ್ಷ ಷಡಕ್ಷರಿ ಕೃಪಾಕಟಕ್ಷದಿಂದ ಮಾಜಿ ಜಿಲ್ಲಾಧ್ಯಕ್ಷ ಪಾಲಾಕ್ಷಿ ಹಲವಾರು ದಿನಗಳ ಕಾಲ ಅಧ್ಯಕ್ಷರಾಗಿ ಮುಂದುವರಿದಿದ್ದರು. ಕಾಂಗ್ರೆಸ್ ಸರಕಾರ ಬಂದ ನಂತರ ಪಿಡಬ್ಲ್ಯೂಡಿ ಇಲಾಖೆ ವೀರೇಶ್ ಎಚ್ ಒಡೆಯನಾಪುರ್ ರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದವರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಜುಲೈ 11ರಂದು ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಅಧ್ಯಕ್ಷ, ಖಚಾಂಚಿ, ಕೌನ್ಸಿಲ್ ಮೆಂಬರ್‌ಗಳ ಆಯ್ಕೆಗೆ ಚುನಾವಣೆ ನಡೆದಿತ್ತುಘಿ. ನೌಕರರಾದ ಬಿ.ಪಾಲಾಕ್ಷಿ, ಸಿ.ಪರುಶುರಾಮಪ್ಪ, ಎಚ್.ಬಸವರಾಜ್, ಸಿ.ತಿಪ್ಪೇಸ್ವಾಮಿ, ಬಿ.ಮಂಜುನಾಥ್, ಕಲ್ಪನ, ಎಸ್.ಕಲ್ಲೆಶ್ವರಪ್ಪ,ಶ್ರೀನಿವಾಸ ನಾಯಕ್ ಅಧ್ಯಕ್ಷ ಸ್ಥಾನದ ಆಗ ಆಂಕಾಕ್ಷಿಗಳಾಗಿದ್ದರು. ಇದಾದ ಬಳಿಕ ಬಿ.ಪಾಲಾಕ್ಷಿ ಅಧ್ಯಕ್ಷರಾದರು. ಈ ಸಮಯದಲ್ಲಿ ಮೂರು ಅವಧಿಗಳ ಒಪ್ಪಂದ ನಡೆದಿತ್ತುಘಿ. ಅದರಲ್ಲಿ ಜಿಲ್ಲಾಪಂಚಾಯಿತಿಯ ಬಸವರಾಜ್, ಶಿಕ್ಷಣ ಇಲಾಖೆಯ ಶ್ರೀನಿವಾಸ ನಾಯಕ್, ತಾಂತ್ರಿಕ ಶಿಕ್ಷಣ ಇಲಾಖೆಯ ತಿಪ್ಪೇಸ್ವಾಮಿ, ಮೀನುಗಾರಿಕೆ ಇಲಾಖೆಯ ಉಮೇಶ್ ಇನ್ನೇರಡು ಅವಧಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಬಿ.ಪಾಲಾಕ್ಷಿ ಮಾತ್ರ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿರಲಿಲ್ಲಘಿ. ಇದು ಇತರರ ಕೆಂಗಣ್ಣಿಗೆ ಗುರಿಯಾಗಿತ್ತುಘಿ. ರಾಜ್ಯಾಧ್ಯಕ್ಷ ಷಡಕ್ಷರಿ ಅನುಮತಿ ಮೇರೆಗೆ ಅಧ್ಯಕ್ಷಘಿ, ಉಪಾಧ್ಯಕ್ಷಘಿ, ಖಚಾಂಚಿ ಸ್ಥಾನಕ್ಕೆ ಪ್ರಭಾರ ತಂದು ಕೂರಿಸಲಾಗಿದೆ. ಇನ್ನೇನೂ 2024ರ ಮೇಗೆ ಅಧಿಕಾರವಧಿ ಇದ್ದುಘಿ, ಚುನಾವಣೆ ನಡೆಸಲು ಅನುಮತಿ ಸಿಗುತ್ತಿಲ್ಲಘಿ. ಕೇವಲ ಪ್ರಭಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಸದ್ಯ ಶಿಕ್ಷಣ ಇಲಾಖೆಯ ಶ್ರೀನಿವಾಸ ನಾಯಕ್ ಚಿತ್ರದುರ್ಗಕ್ಕೆ ಹೋಗಿರುವ ಕಾರಣ ಅವರ ಸ್ಥಾನ ರದ್ದಾಗಿದೆ. ಬಸವರಾಜ್, ತಿಪ್ಪೇಸ್ವಾಮಿ, ಉಮೇಶ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ.

ಸಾಮಾನ್ಯವಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಗೌರವ ಇದ್ದುಘಿ, ಆರ್ಥಿಕವಾಗಿ ಸಂಘ ಪ್ರಭಲವಾಗಿದ್ದುಘಿ, ಓಪಿಎಸ್ ಹೋರಾಟ ಸೇರಿದಂತೆ ಇನ್ನಿತರ ನೌಕರರ ಗುರುತಿಸುವಿಕೆಗೆ ಅಧ್ಯಕ್ಷ ಪ್ರಮುಖವಾಗಿರುತ್ತಾನೆ. ಅಲ್ಲದೇ ರಾಜಕಾರಣಿಗಳಿಗೂ ಇವರು ಬೇಕಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಒಂದು ವೇಳೆ ಅಧ್ಯಕ್ಷ ಸ್ಥಾನಕ್ಕೆ ಹೋರಾಟ ಮಾಡುವುದು ಗೊತ್ತಾದರೆ, ಅವರನ್ನು ಇಲ್ಲಿಂದ ಎತ್ತಂಗಡಿ ಮಾಡುವ ವ್ಯವಸ್ಥಿತ ರಾಜಕಾರಣ ನಡೆಯುತ್ತಿದೆ. ಬೇರೆ ಕಡೆ ವರ್ಗಾವಣೆ ಆದರೆ ಇಲ್ಲಿ ಸದಸ್ಯತ್ವ ರದ್ದಾಗುವ ಕಾರಣ ಯಾರು ಕೂಡ ತುಟಿ ಬಿಚ್ಚುತ್ತಿಲ್ಲಘಿ. ಕೇವಲ ತೆರೆ ಮರೆ ಆಟ ನಡೆಯುತ್ತಿದೆ.

ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಅಂದಾಜು 56 ನಿರ್ದೇಶಕ ಮತಗಳ ಮೇಲೆ ಆಂಕಾಕ್ಷಿಗಳು ಕಣ್ಣಿಟ್ಟಿದ್ದಾರೆ. ಈ ಮತಗಳ ಸೆಳೆಯಲು ಹಣಾಹಣಿ ಏರ್ಪಟ್ಟಿದ್ದು, ನಾನಾ ತಂತ್ರಗಳನ್ನು ತೆರೆಮರೆಯಲ್ಲಿ ಹೆಣಿಯುತ್ತಿದ್ದಾರೆ. ಅಲ್ಲದೇ ಬಣಗಳಾಗಿ ಮಾರ್ಪಾಡಾಗಿರುವ ಹಿನ್ನೆಲೆ ಅವಿರೋಧ ಆಯ್ಕೆಗೆ ಆಗಾಗ ಹಿರಿಯರ ನೇತೃತ್ವದಲ್ಲಿ ಔಪಾಚರಿಕ ಸಭೆ ನಡೆಯುತ್ತಿದೆ. ಆದರೂ ಅದು ಲ ಕೊಡುತ್ತಿಲ್ಲಘಿ. ಈ ನಡುವೆ ರಾಜಕೀಯ ಕೂಡ ಎಂಟ್ರಿ ಹೊಡೆದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಚುನಾವಣೆ ನಡೆದರೆ ಹೆಚ್ಚು ಹಣ ಖರ್ಚಾಗುತ್ತದೆ. ಸುಖಾಸುಮ್ಮನೆ ಒಬ್ಬರೊಬ್ಬರ ನಡುವೆ ದೇಷ ಉಂಟಾಗುತ್ತದೆ. ಸೂಕ್ತ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡೋಣ ಎಂದು ಹಿರಿಯರಾದ ರೇವಣಸಿದ್ದಪ್ಪ, ಉಜ್ಜನಪ್ಪ, ಬಸವರಾಜ್, ಶಿವಶಂಕರ್ ಈ ಹಿಂದೇ ನಡೆದ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ್ದರು ಎಂಬ ಮಾತಿದೆ. ಆದರೆ, ಇನ್ನು ಕೆಲವರು ನಮಗೆ ಅವಿರೋಧ ಆಯ್ಕೆ ಇಷ್ಟವಿಲ್ಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು. ಐದು ವರ್ಷದ ಅಧಿಕಾರವನ್ನು ಹಂಚಿಕೆ ಮಾಡಿದರೆ, ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಿಲ್ಲ. ಚುನಾವಣೆ ಮೂಲಕ ಒಬ್ಬರೇ ಅಧ್ಯಕ್ಷರಾಗಿ ನೇಮಕವಾದರೆ ನಾನಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುಕೂಲವಾಗಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

ನಿರ್ದೇಶಕರ ಸಂಖ್ಯೆ 66: ಈ ಹಿಂದೆ ಎಸ್ಟಿ 11, ಎಸ್ಸಿ 10, ಓಬಿಸಿ 18, ಸಾಮಾನ್ಯ 22 ನಿರ್ದೇಶಕರಿದ್ದು, ಒಟ್ಟು 61 ನಿರ್ದೇಶಕರಲ್ಲಿ ಶಿಕ್ಷಣ ಇಲಾಖೆ 7, ಆರೋಗ್ಯ ಇಲಾಖೆ 6, ಕಂದಾಯ 3, ಕೃಷಿ 2, ಲೋಕೋಪಯೋಗಿ 2 ಸೇರಿ ಇನ್ನಿತರ ಇಲಾಖೆಗಳ ನಿರ್ದೇಶಕರು 1 ಸ್ಥಾನ ಪಡೆದಿದ್ದಾರೆ. ಇನ್ನುಳಿದ ತಾಲೂಕಿನ 5 ಅಧ್ಯಕ್ಷರು ಮತ ಹಾಕಬಹುದಾಗಿದೆ. ಹಲವು ಆಂಕಾಕ್ಷಿಗಳು ಶಿಕ್ಷಣ ಇಲಾಖೆ ನಿರ್ದೇಶಕರ ಸಂಖ್ಯೆ ಹೆಚ್ಚಿರುವುದರಿಂದ ಆ ಮತಗಳ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು. ಪ್ರಸ್ತುತ ಹಲವರು ವರ್ಗಾವಣೆಗೊಂಡಿದ್ದು, ಎಷ್ಟು ಸಂಖ್ಯೆ ಇದೆ ಎಂಬುದು ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!