ನವ ದಂಪತಿಗಳು ಪೋಟೋ ಶೂಟ್ ಮಾಡಿಸಿಕೊಳುವಾಗ ಕಾಲುಜಾರಿ ಸಾವನ್ನಪಿದ್ದಾರೆ.

ನವ ದಂಪತಿಗಳು ಪೋಟೋ ಶೂಟ್ ಮಾಡಿಸಿಕೊಳುವಾಗ ಕಾಲುಜಾರಿ ಸಾವನ್ನಪಿದ್ದಾರೆ.

ಚೆನ್ನೈ : ಮದುವೆಯಾಗಿದ್ದ ಹೊಸ ಜೋಡಿಯೊಂದು ಫೋಟೋ ಶೂಟ್ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಇತ್ತೀಚೆಗೆ ವಿವಾಹವಾದ ವೈದ್ಯ ದಂಪತಿ  ಲೋಕೇಶ್ವರನ್  ಮತ್ತು ವಿಬುಷ್ನಿಯಾ ಮೃತ ದುದೈವಿಗಳಾಗಿದ್ದು, ಇವರು ಜೂನ್ 1 ರಂದು ಪೂನಮಲ್ಲೆಯಲ್ಲಿ ವಿವಾಹವಾಗಿದ್ದರು.

ಸೇಲಂ ಜಿಲ್ಲೆಯ ವೈದ್ಯ ಲೋಕೇಶ್ವರನ್ ಮತ್ತು ಚೆನ್ನೈನ ಪೂಂತಮಲ್ಲಿಯ ವಿಬುಷ್ನಿಯಾ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ವೈದ್ಯರು ತಮ್ಮ ಮನೆಯವರಿಗೆ ತಮ್ಮ ಪ್ರೀತಿಯ ಬಗ್ಗೆ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಖುಷಿಯಿಂದ ಮದುವೆಯಾಗಿದ್ದರು.

ಇತ್ತೀಚೆಗೆ ಮಾಲ್ಡೀವ್ಸ್, ಬಾಲಿಯಂತಹ ದ್ವೀಪಗಳಿಗೆ ನವವಿವಾಹಿತರು ಹನಿಮೂನ್ ಹೋಗುವುದು ಟ್ರೆಂಡ್ ಆಗಿರುವಾಗಲೇ ಇಂಡೋನೇಷ್ಯಾದಲ್ಲಿರುವ ಬಾಲಿ ದ್ವೀಪಕ್ಕೆ ವೈದ್ಯ ದಂಪತಿ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದಾರೆ. ಅದರಂತೆ ದಂಪತಿ  ಬಾಲಿ ದ್ವೀಪದಲ್ಲಿ ಸ್ಪೀಡ್ ಮೋಟಾರ್ ಬೋಟ್ ಮೂಲಕ ತಮ್ಮ ಫೋಟೋಶೂಟ್ ಮಾಡಲು ನಿರ್ಧರಿಸಿದ್ದರು.

ಆದರೆ ನವ ದಂಪತಿ ಲೋಕೇಶ್ವರನ್ ಮತ್ತು ವಿಬುಷ್ನಿಯಾ ಅವರಿದ್ದ ಮೋಟಾರ್ ಬೋಟ್ ಅಪಘಾತಕ್ಕೀಡಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಣಯ ಪಕ್ಷಿಗಳು ಸಾವನ್ನಪ್ಪಿರುವುದು ಎರಡು ಕುಟುಂಬಗಳಿಗೆ ತೀವ್ರ ಆಘಾತ ತಂದಿದೆ.

ಮೃತದೇಹಗಳನ್ನು ಭಾರತಕ್ಕೆ ಮರಳಿ ತರಲು ಬಾಲಿಗೆ ಕುಟುಂಬಗಳು ತೆರಳಿದ್ದರು. ಅಲ್ಲಿನ ಸ್ಥಳೀಯ ಪೊಲೀಸರು ಕುಟುಂಬ ಸದಸ್ಯರೊಂದಿಗೆ  ಮಾತುಕತೆ ನಡೆಸಿದ ನಂತರ ಶುಕ್ರವಾರ ಅಪಘಾತ ಸಂಭವಿಸಿದೆ ಎಂದು ವಿಷಯ ತಿಳಿದಿದೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಲೋಕೇಶ್ವರನ್ ಮೃತದೇಹ ಪತ್ತೆಯಾಗಿದ್ದರೆ, ಶನಿವಾರ ಬೆಳಗ್ಗೆ  ವಿಬುಷ್ನಿಯಾ ಶವ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!