ಮಂಗಳೂರು : ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಸಾರಿಗೆ ಸೌಲಭ್ಯ ಪಡೆದು, ಫ್ರೀಯಾಗಿ ಬಸ್‌ನಲ್ಲಿ ಸಂಚರಿಸಲು ಮಹಿಳೆಯರಿಗೆ ಹಲವಾರು ಕಾರಣಗಳಿವೆ.
ಆದರೆ ಈ ಗೃಹಿಣಿಯೊಬ್ಬಳು ತನ್ನ 11 ತಿಂಗಳ ಮಗವನ್ನು ಬಿಟ್ಟು ಪ್ರಿಯಕರನನ್ನ ನೋಡಲು ಉಚಿತವಾಗಿ ಬಸ್‌ನಲ್ಲಿ ಬಂದು ನಾಪತ್ತೆಯಾಗಿದ್ದಾಳೆ.
ಪ್ರಿಯಕರನನ್ನ ನೋಡಲು ಫ್ರೀ ಬಸ್ ಹತ್ತಿ ಪ್ರಿಯತಮೆ ಹುಬ್ಬಳಿಯಿಂದ ದೂರದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದು ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಾಳೆ.
ಈ ಹಿಂದೆಯೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಯುವತಿಗೆ ಬೇರೆಯವನ ಜೊತೆ ಮದುವೆ ಆದ ಬಳಿಕವೂ ತನ್ನ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಳು. ಪುತ್ತೂರು ಕೋಡಿಂಬಾಡಿ ಸಮೀಪದಲ್ಲಿ ಪ್ರಿಯಕರ ತೋಟದ ಕೆಲಸ ಮಾಡುತ್ತಿದ್ದ. ಗಂಡನ ಮನೆಯವರು ಹಾಗೂ ಮಹಿಳೆಯ ಮನೆಯವರಿಂದ ರಾತ್ರೋ ರಾತ್ರಿ ಪುತ್ತೂರಿನಲ್ಲಿ ವಿವಾಹಿತೆಗಾಗಿ ಹುಡುಕಾಟ ನಡೆದಿದೆ.
