ರಾಷ್ಟ್ರೀಯ ಸುದ್ದಿ

 ‘ಬಿಲ್ಲವೋತ್ಸವ’ ವೈಭವ : ಕತಾರ್‌ನಲ್ಲಿ ಕನ್ನಡಿಗರ ಸಮ್ಮೇಳನ..

 ‘ಬಿಲ್ಲವೋತ್ಸವ’ ವೈಭವ : ಕತಾರ್‌ನಲ್ಲಿ ಕನ್ನಡಿಗರ ಸಮ್ಮೇಳನ..

ಕತಾರ್: ಕತಾರ್‌ನಲ್ಲಿ ಬಿಲ್ಲವೋತ್ಸವ ಕಾರ್ಯಕ್ರಮ ಗಮನಸೆಳೆಯಿತು. ದೆಹಲಿ ಸಾರ್ವಜನಿಕ ಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ “ಬಿಲ್ಲವೋತ್ಸವ-2023” ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಲಾಯಿತು.

ಕತಾರ್ ದೇಶದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುತ್ತಾ, ಕರ್ನಾಟಕ ಸಂಘ ಕತಾರ್ ಸದಸ್ಯತ್ವವನ್ನು ದಾಖಲೆಯ ಸಂಖೆಗೆ ಹೆಚ್ಚಿಸಿದ ಹೆಮ್ಮೆಗೆ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಪಾತ್ರರಾಗಿದ್ದಾರೆ.

 ‘ಬಿಲ್ಲವೋತ್ಸವ’ ವೈಭವ : ಕತಾರ್‌ನಲ್ಲಿ ಕನ್ನಡಿಗರ ಸಮ್ಮೇಳನ..

ಕನ್ನಡ ಚಲನಚಿತ್ರಗಳನ್ನು ಕತಾರ್‌ನಲ್ಲಿ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿಕೊಡುವುದಕ್ಕೆ, ಪರಿಸರ ಜಾಗೃತಿ ಸಂಬಂಧ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಗೊಳಿಸಿರುವರು, ಕರೋನ ಮಹಾಮರಿಯ ತಾಂಡವದ ಕಾಲದಲ್ಲಿ ‘ಒಂದೇ ಭಾರತ್’ ವಿಶೇಷ ವಿಮಾನ ಸೇವೆಯಲ್ಲಿ ಅವಶ್ಯಕತೆಯಿರುವ ಭಾರತೀಯರನ್ನು ಕತಾರಿನಿಂದ ಮಾತೃಭೂಮಿಗೆ ಹಿಂದಿರುಗಲು ಸಹಾಯ ಮಾಡಿರುವುದಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕತಾರ್ ಬಿಲ್ಲವಾಸ್ ಸಂಘದ ಅಧ್ಯಕ್ಷ ರಘುನಾಥ ಅಂಚನ್, ಉಪಾಧ್ಯಕ್ಷ ಅಮಿತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಸೀಮಾ ಪೂಜಾರಿ, ಬಹರೈನ್ ಬಿಲ್ಲವಾಸ್ ಸಂಘದ ಪ್ರಧಾನ ಕಾರ್ಯದರ್ಶಿ ರೂಪೇಶ್ ಸಾಲಿಯನ್, ಬಹರೈನ್ ಬಿಲ್ಲವಾಸ್ ಸಂಘದ ಪೂರ್ವಾಧ್ಯಕ್ಷ ಅಜಿತ್ ಬಂಗೇರಾ , ಚಲನಚಿತ್ರ ನಟ ಪೃಥ್ವಿ ಅಂಬಾರ್, ಚಿಂತಕರಾದ ಡಾ॥ ಅರುಣ್ ಉಲ್ಲಾಳ್ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Click to comment

Leave a Reply

Your email address will not be published. Required fields are marked *

Most Popular

To Top