ಮಿಸ್ಸೆಸ್ ಯೂನಿವರ್ಸ್​ ಇಂಡಿಯಾ ಪ್ರಶಸ್ತಿಯ ಗರಿ ದಾವಣಗೆರೆಯ ಮೇಘಾಗೆ

ಮಿಸ್ಸೆಸ್ ಯೂನಿವರ್ಸ್​ ಇಂಡಿಯಾ ಪ್ರಶಸ್ತಿಯ ಗರಿ ದಾವಣಗೆರೆಯ ಮೇಘಾಗೆ

ದಾವಣಗೆರೆ: ಎಸ್,ಕೆ, ಸ್ಟಾರ್ ಎಂಟರ್ ಟೈನ್ ಮೆಂಟ್ ಈಚೆಗೆ ನೋಯ್ಡಾದಲ್ಲಿ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ನಗರದ ಕೆ.ಬಿ.ಜೆ. ಗ್ರಾಮಿಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಮೇಘಾ ಅವರು ಮಿಸ್ಸೆಸ್ ಯೂನಿವರ್ಸ್​ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮಿಸ್ಸೆಸ್ ಯೂನಿವರ್ಸ್​ ಇಂಡಿಯಾ ಪ್ರಶಸ್ತಿಯ ಗರಿ ದಾವಣಗೆರೆಯ ಮೇಘಾಗೆವಿವಿಧ ರಾಜ್ಯಗಳ 25 ಸ್ಪರ್ಧಿಗಳನ್ನು ಹಿಂದಕ್ಕಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಎಂದು ಕೆಬಿಜೆ ಸಂಸ್ಥೆ ಖಜಾಂಚಿ ಬಿ. ಪಂಚಾಕ್ಷರಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .

ಮೂರು ವರ್ಷಗಳಿಂದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು,ಹುಬ್ಬಳಿಯಲ್ಲೇ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ನಂತರ ವಿಶ್ವಾಸ ಬಂದಿತು. ಆದರೆ ಆರ್ಥಿಕ ಕಾರಣದಿಂದ ಮಿಸ್ಸೆಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಲ್ಲಿಲ.  ನಂತರ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲಾರಂಭಿಸಿದೆ.

ಮಿಸ್ಸೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುವ ಹೆಮ್ಮೆ ನನಗಿದೆ ಎಂದು ಕೆ.ಸಿ.ಮೇಘಾ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!