ಯರಗುಂಟೆ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಯರಗುಂಟೆ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ;  ನಗರ ಉಪವಿಭಾಗ-2 ರ ವ್ಯಾಪ್ತಿಯ 66/11ಕೆವಿ ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್16-ಎಸ್.ಜೆ.ಎಂ ಮಾರ್ಗದ ವ್ಯಾಪ್ತಿಯಲ್ಲಿ ಜಲಸಿರಿ (24*7) ಶುದ್ದಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಜುಲೈ 13 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ   ವಿದ್ಯುತ್ ವ್ಯತ್ಯಯವಾಗಲಿದೆ.

ಈ ವ್ಯಾಪ್ತಿಯ ಕೊಂಡಜ್ಜಿ ರಸ್ತೆ, ಎಸ್‍ಜೆಎಂ ನಗರ, ಸೇವಾದಳ ಕಾಲೋನಿ, ಹೊಸಕ್ಯಾಂಪ್, ಎಸ್‍ಎಮ್‍ಕೆ ನಗರ 2ನೇ ಹಂತ, ವೀರಾಂಜನೇಯ ಪೆಟ್ರೋಲ್ ಬಂಕ್ ಹತ್ತಿರ, ಬಿ.ಜೆ.ಎಂ ಸ್ಕೂಲ್, ಆರ್‍ಟಿಓಆಫೀಸ್,  ಬೂದಿಹಾಳ್ ರಸ್ತೆ, ಬಾಬು ಜಗಜೀವನ್‍ರಾಂ ನಗರ, ಗೌರಸಂದ್ರ ಮಾರಮ್ಮದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!