ರಾಷ್ಟ್ರಮಟ್ಟದ ಮೃಗಾಲಯವನ್ನಾಗಿ ಮಾಡಲು 23 ಕೋಟಿ ಡಿಪಿಆರ್ : ತೋಳ ಸಫಾರಿಗೆ ಆದ್ಯತೆ

ರಾಷ್ಟ್ರಮಟ್ಟದ ಮೃಗಾಲಯವನ್ನಾಗಿ ಮಾಡಲು 23 ಕೋಟಿ ಡಿಪಿಆರ್ : ತೋಳ ಸಫಾರಿಗೆ ಆದ್ಯತೆ

ದಾವಣಗೆರೆ : ತಾಲೂಕಿನ ಆನಗೋಡು ಬಳಿ ಇರುವ ಇಂದಿಯಾ ಪ್ರಿಯದರ್ಶಿನಿ ಕಿರು ಮೃಗಾಲಯವನ್ನು ರಾಷ್ಟ್ರಮಟ್ಟದ ಮೃಗಾಲಯನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 23 ಕೋಟಿ ರೂ ಮೊತ್ತದ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಎನ್.ಎಚ್.ಜಗನ್ನಾಥ್ ಹೇಳಿದ್ದಾರೆ.

ರಾಷ್ಟ್ರಮಟ್ಟದ ಮೃಗಾಲಯವನ್ನಾಗಿ ಮಾಡಲು 23 ಕೋಟಿ ಡಿಪಿಆರ್ : ತೋಳ ಸಫಾರಿಗೆ ಆದ್ಯತೆ

ಆನಗೋಡು ಪಾರ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದಲ್ಲಿಯೇ ಇರುವ ಈ ಕಿರು ಮೃಗಾಲಯ ಇದೀಗ 15 ಎಕರೆ ಪ್ರದೇಶದಲ್ಲಿ ಇದ್ದು, ಇದನ್ನು 185 ಎಕರೆ ಪ್ರದೇಶಕ್ಕೆ ವಿಸ್ತರಿಸಲು ಅನುಮೋದನೆ ದೊರೆತಿದೆ.

ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಮೃಗಾಲಯಗಳಲ್ಲಿ ಇರುವ ಹುಲಿ. ಸಿಂಹ, ಚಿರತೆ ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳನ್ನು ಇಲ್ಲಿಗೆ ತಂದು ವೀಕ್ಷಣೆಗೆ ಇಡಲಾಗುವುದು. ಇದಕ್ಕಾಗಿ 230 ಕೋಟಿ ರೂ ಮೊತ್ತದ ಯೋಜನಾ ವರದಿಯನ್ನು ತಯಾರಿಸಿ ರಾಜ್ಯ ಮೃಗಾಲಯ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಮೂಲಕ ಕೇಂದ್ರ ಸರ್ಕಾರಕ್ಕೆ ಜೂನ್ 2 ರಂದು ಸಲ್ಲಿಸಲಾಗಿದ್ದು, ಮುಂದಿನ 15 ದಿನಗಳ ಒಳಗೆ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ರಾಷ್ಟ್ರಮಟ್ಟದ ಮೃಗಾಲಯವನ್ನಾಗಿ ಮಾಡಲು 23 ಕೋಟಿ ಡಿಪಿಆರ್ : ತೋಳ ಸಫಾರಿಗೆ ಆದ್ಯತೆ

ತೋಳ ಸಾರಿ: ದೇಶದ ವಿವಿಧ ಕಡೆಗಳಲ್ಲಿ ಹುಲಿ, ಸಿಂಹ. ಕಾಡೆಮ್ಮ ಸೇರಿದಂತೆ ವಿವಿಧ ಸಾರಿ ಪ್ರದೇಶಗಳನ್ನು ಕಾಣಬಹುದು. ಆದರೆ ದೇಶ, ರಾಜ್ಯ ಸೇರಿದಂತೆ ಎಲ್ಲೂ ಇರದ ತೋಳದ ಸಾರಿಯನ್ನು ಆನಗೋಡು ಪ್ರಿಯಿದರ್ಶಿನಿ ಕಿರು ಮೃಗಾಲಯದಲ್ಲಿ ಆರಂಭಿಸುವುದು ಹೊಸ ಯೋಜನಾ ವರದಿಯಲ್ಲಿ ಪ್ರಸ್ತಪಾವಾಗಿದೆ. ಈ ಭಾಗದಲ್ಲಿ ತೋಳ ವಿಶೇಷ ಪ್ರಾಣಿಯಾಗಿ ಕಂಡು ಬಂದಿದೆ.

ತೋಳ ಮತ್ತು ನರಿಗೆ ಇರುವ ಸಾಮ್ಯತೆ ಬಗ್ಗೆ ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ತಿಳಿಸಿಕೊಡುವುದು ಈ ಸಾರಿ ಯೋಜನೆಯ ಉದ್ದೇಶವಾಗಿದೆ. 5 ಎಕರೆ ಪ್ರದೇಶದಲ್ಲಿ ತೋಳದ ಸಾರಿ ಯೋಜನೆ ಜಾರಿಗೆ ಬರಲಿದ್ದು, ವಾಹನದಲ್ಲಿ ಸಾಗಿ ಈ ತೋಳಗಳನ್ನು ನೋಡಲು ಅವಕಾಶ ಕಲ್ಪಿಸಲಾಗುವುದು ಎಂದರು.

ಇದುವರೆಗೂ ಪ್ರಾಣಿಗಳನ್ನು ಕಬ್ಬಿಣದ ಸರಳುಗಳಿಂದ ಮಾಡಿದ ಮನೆಯಲ್ಲಿ ಇಟ್ಟು ವೀಕ್ಷಣೆ ಮಾಡುವ ಕಾಲ ಮುಗಿಯಿತು. ಇನ್ನೆನಿದ್ದರೂ ಸ್ವಾಭಾವಿಕ, ಸ್ಚಚ್ಛಂದ ಪ್ರದೇಶದ ಲ್ಲಿ 2-3 ಹೆಕ್ಟೇರ್ ಪ್ರದೇಶದಲ್ಲಿ ಸ್ವತಂತ್ರವಾಗಿ ಬಿಟ್ಟು, ಪಾರದರ್ಶಕ ದಪ್ಪನೆ ಗಾಜಿನ ಮೂಲಕ ಅತೀ ಸಮೀಪದಿಂದ ನೋಡುವ ವ್ಯವಸ್ಥೆ ಜಾರಿಗೆ ಬರಲಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮಾವಳಿಗಳು ಇತ್ತೀಚೆಗೆ ಸಾಕಷ್ಡು ಬದಲಾಗಿದ್ದು, ಈ ಮಾನದಂಡಗಳ ಅನ್ವಯವೇ ಮೃಗಾಲಯ ನಡೆಯಬೇಕಿದೆ ಎಂದರು.

ರಾಷ್ಟ್ರಮಟ್ಟದ ಮೃಗಾಲಯವನ್ನಾಗಿ ಮಾಡಲು 23 ಕೋಟಿ ಡಿಪಿಆರ್ : ತೋಳ ಸಫಾರಿಗೆ ಆದ್ಯತೆ

ಕೊಂಡು ಕುರಿ ರಿಸರ್ಚ್ : ಈ ಭಾಗದ ವಿಶೇಷತೆ ಎನಿಸಿದ ಕೊಂಡುಕುರಿ ಪ್ರಾಣಿ ಉಳಿವಿಗೆ ವಿಶೇಷ ಹಣವನ್ನು ಮೀಸಲಿಟ್ಟಿದ್ದು ಅದರ ಕುರಿತು ರಿಸರ್ಚ್ ಮಾಡಲು, ಅವುಗಳ ಬೆಳವಣಿಗೆ, ಸಂತಾನೋತ್ಪತಿ ಸೇರಿದಂತೆ ಅನೇಕ ವಿಷಯಗಳ ಕುರಿತು ರಿಸರ್ಚ್ ಮಾಡಲು ಕೂಡ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ಅನುಮೋದನೆ ಸಿಕ್ಕ ನಂತರ ರಾಜ್ಯ ಸರಕಾರ ಹಂತ-ಹಂತವಾಗಿ ಅನುದಾನ ಬಿಡುಗಡೆ ಮಾಡಲಿದ್ದು, ಇಡೀ ರಾಜ್ಯದಲ್ಲಿ ಬೇರೆ ಎಲ್ಲಿಯೂ ಇಲ್ಲದ ಮೃಗಾಲಯ ದಾವಣಗೆರೆಯಲ್ಲಿ ಕಾಣಬಹುದು ಎಂದು ಡಿ ಎಫ್ ಓ ಜಗನ್ನಾಥ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!