ದಾವಣಗೆರೆ: ಕಾಲೇಜು ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಆಯುರ್ವೇದ ವೈಧ್ಯಕೀಯ ವಿದ್ಯಾರ್ಥಿಗೆ ಹಾಲಿನ ವಾಹನ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ದಾವಣಗೆರೆಯ ಬಾತಿ ಬಳಿಯಿರುವ ಅಶ್ವೀನಿ ಆಯುರ್ವೇದಿಕ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ಮನೋಜ್ ಕುಮಾರ್ ಕಾಲೇಜು ಮುಗಿಸಿಕೊಂಡು ನಡೆದು ಹೋಗುವಾಗ ನಂದಿನಿ ಹಾಲು ಸರಬರಾಜು ಮಾಡುವ ವಾಹನ ಡಿಕ್ಕಿಯಾದ ಪರಿಣಾಮ ಮನೋಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮನೋಜ್ ಪ್ರಥಮ ವರ್ಷದ ಬಿ ಎ ಎಂ ಎಸ್ ವ್ಯಾಸಾಂಗ ಮಾಡುತ್ತಿದ್ದು, ದೈಹಿಕ ಶಿಕ್ಷಕ ಗಂಗನರಸಿ ಶಿವಕುಮಾರಸ್ವಾಮಿ ಅವರ ಪುತ್ರ. ಅಂತ್ಯ ಸಂಸ್ಕಾರವನ್ನು ಕುಟುಂಬದ ಮೂಲಗಳ ಪ್ರಕಾರ ಸ್ವಂತ ಊರು ಉಜ್ಜಯಿನಿಯಲ್ಲಿ ಇಂದು ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ವಾಹನವನ್ನ ದಾವಣಗೆರೆ ಗ್ರಾಮಾಂತರ ಪೋಲೀಸ್ ಠಾಣೆಯ ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
