ಆನ್ ಲೈನ್ ಆಪ್ ಲೋನ್: ಆಪ್ ನಿಂದ ಸಾಲ ಪಡೆದ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಆನ್ ಲೈನ್ ಆಪ್ ನಿಂದ ಸಾಲ ಪಡೆದು ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 22 ವರ್ಷದ ತೇಜಸ್ ಮೃತ ವಿದ್ಯಾರ್ಥಿಯಾಗಿದ್ದಾನೆ.
ಸ್ನೇಹಿತ ಮಹೇಶ್ ಎಂಬಾತನಿಗೆ ಆಪ್ ಮೂಲಕ ತೇಜಸ್ ಲೋನ್ ಪಡೆದಿದ್ದ. ಆದರೆ ಯಾವುದೇ ಇಎಂಐ ನ್ನು ಮಹೇಶ್ ಒಂದು ವರ್ಷದಿಂದಲೂ ಕಟ್ಟಿರಲಿಲ್ಲ. ಸಾಧಾರಣ 30 ಸಾವಿರದ ವರೆಗೆ ಸಾಲ ಪಡೆದಿದ್ದ ಎಂಬುವುದು ತಿಳಿದು ಬಂದಿದೆ. ಆಪ್ ನವರು ನಿರಂತರ ಕಿರುಕುಳ ನೀಡಿದ್ದು ತನ್ನ ನಗ್ನ ಫೋಟೋವನ್ನು ಸಂಬಂಧಿಕರಿಗೆ ಬಹಿರಂಗ ಪಡಿಸುವುದಾಗಿ ಬೆದರಿಕೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಇದೆ.
ತೇಜಸ್ ತನ್ನ ಸ್ವಗೃಹದಲ್ಲಿ ತಾಯಿಯ ವೇಲ್ ನಿಂದ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.