ವಿದ್ಯುತ್ ದರ, ಎಸ್ ಎಸ್ ಹೇಳಿಕೆ ಸ್ವಾಗತಾರ್ಹ- ಮಾಜಿ ಮೇಯರ ಉಮಾಪ್ರಕಾಶ್

ವಿದ್ಯುತ್ ದರ, ಎಸ್ ಎಸ್ ಹೇಳಿಕೆ ಸ್ವಾಗತಾರ್ಹ- ಮಾಜಿ ಮೇಯರ ಉಮಾಪ್ರಕಾಶ್

ದಾವಣಗೆರೆ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದು ನಷ್ಟದಲ್ಲಿ ನಡೆಯುತ್ತಿರುವ ಕೈಗಾರಿಕೆಗಳಿಗೆ ಮತ್ತಷ್ಟು ಹೊರೆ ಎಂದು ದಾವಣಗೆರೆ ಮಾಜಿ ಮೇಯರ್ ಉಮಾ ಪ್ರಕಾಶ್ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅನಾರೋಗ್ಯಕರ ಪೈಪೋಟಿಯಿಂದಾಗಿ ಪರಸ್ಪರ ಕೈಗಾರಿಕೆಗಳು ವ್ಯವಹಾರಿಕ ಪೈಪೋಟಿಯಿಂದಾಗಿ ನಷ್ಟ ಅನುಭವಿಸುತ್ತಿವೆ. ಇದೀಗ ವಿದ್ಯುತ್ ರ ಏರಿಕೆಯಿಂದಾಗಿ ಕೈಗಾರಿಕೆಗಳ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತದೆ. ಕೆಲಸಗಾರರ ಕೊರತೆಯಿಂದ ಯಂತ್ರಗಳ ಸಹಾಯದಿಂದ ಹಲವು ಕೈಗಾರಿಕೆಗಳು ನಡೆಯುತ್ತಾ ಇವೆ. ವಿದ್ಯುತ್ ದರ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತದೆ. ಹಾಗಾಗಿ ಕೈಗಾರಿಕೆಗಳು ನಷ್ಟಕ್ಕೆ ಒಳಗಾಗುತ್ತವೆ. ಈ ಸಮಯದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಸೂಚಿಸಿರುವುದು ಸ್ವಾಗತಾರ್ಹ.

ಸರ್ಕಾರ ವಿದ್ಯುತ್ ಕೈ ಬಿಟ್ಟು ಸಣ್ಣ ಕೈಗಾರಿಕೆಗಳ ಸಹಾಯಕ್ಕೆ ಬರಲಿ ಎಂದು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಹಾಲಿ ಸದಸ್ಯರಾದ ಶ್ರೀಮತಿ ಉಮಾ ಪ್ರಕಾಶ್ ರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಖಾಸಗಿ ಬಸ್ ಗಳವರಿಗೆ ಪ್ರಯಾಣಿಕರ ಕೊರತೆಯಿಂದಾಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಖಾಸಗಿ ಬಸ್ ಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ರಾಜ್ಯಾದ್ಯಂತ ಇವೆ ಅಲ್ಲದೆ ಆಟೋ ಚಾಲಕರಿಗೆ ಸಹ ಆಟೋದಲ್ಲಿ ಪ್ರಯಾಣಿಕರು ಸಿಗದೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಅಂತಹ ಕುಟುಂಬಗಳ ಮಕ್ಕಳಿಗೆ ಖಾಸಗಿ ಶಾಲೆ ಕಾಲೇಜುಗಳಲ್ಲಿ ಮಕ್ಕಳ ಶುಲ್ಕವನ್ನು ಸರ್ಕಾರ ಬರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮತ್ತು ಆಟೋ ದವರ ಪರ್ಮಿಟ್ ಮತ್ತು ಎಫ್ ಸಿ ಶುಲ್ಕಗಳನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಮೂಲಕ ಆಟೋ ಚಾಲಕರಿಗೆ ನೆರವು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!