ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 10 ರಂದು ಸಾಂಸ್ಕೃತಿಕ ಸೌರಭ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಶಾಸ್ತ್ರ ವಿಭಾಗದ ವತಿಯಿಂದ ಸಾಂಸ್ಕೃತಿಕ ಸೌರಭ 2023 ಕಾರ್ಯಕ್ರಮವನ್ನು ದಿನಾಂಕ 10/06/2023 ರಂದು ಹಮ್ಮಿಕೊಳ್ಳಲಾಗಿದೆ. ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಈ ವರ್ಷವೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಆಯೋಜನೆ ಮಾಡಿರುತ್ತಾರೆ.

ಕಾರ್ಯಕ್ರಮದಲ್ಲಿ ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಉಡುಗೆ ತೊಡುಗೆ ಗಳೊಂದಿಗೆ ವಿವಿಧ ಕಲೆಗಳ ಕುರಿತು ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವರುಕಾರ್ಯಕ್ರಮವನ್ನು ನಗರವಾಣಿ ಪತ್ರಿಕೆಯ ಸಹ ಸಂಪಾದಕರಾದ ಬಿ ಎನ್ ಮಲ್ಲೇಶ್ ರವರು ಉದ್ಘಾಟಿಸಿ ಉದ್ಘಾಟನಾ ನುಡಿಗಳನ್ನು ಆಡುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಎಸ್ ಆರ್ ಅಂಜಿನಪ್ಪನವರು ವಹಿಸಿಕೊಳ್ಳುವರು. ರಕ್ತವಿತವಾಗಿ ಕಾಲೇಜಿನ ಅಧ್ಯಾಪಕರಾದ ವೆಂಕಟೇಶ್ ಬಾಬುರವರು ಮಾತನಾಡುವರು ಮುಖ್ಯ ಅತಿಥಿಗಳಾಗಿ ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರಾದ ಪ್ರೊ ಕೆ ನಾರಾಯಣಸ್ವಾಮಿ ವಿಭಾಗದ ಮುಖ್ಯಸ್ಥರಾದ ಬೀ ಸಿ ತಹಸೀಲ್ದಾರ್ ರವರು ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ ಮರಳಸಿದ್ದಪ್ಪನವರು ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಗೀತಾದೇವಿ ರವರು ಭಾಗವಹಿಸುವರು. ವಾಣಿಜ್ಯಶಾಸ್ತ್ರ ವಿಭಾಗದ ಎಲ್ಲಾ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!