ಲೋಕಲ್ ಸುದ್ದಿ

ಖಾಸಾಗಿ – ಸರ್ಕಾರಿ ಬಸ್ ಗಳಿಂದ ಸುಗಮ‌ ಸಂಚಾರಕ್ಕೆ ತೊಂದರೆ: ಈ ಅಂತ್ಯಕ್ಕೆ ಇತಿಶ್ರೀ ಯಾವಾಗ.!

ಖಾಸಾಗಿ, ಬಸ್, ಸರ್ಕಾರಿ, ಬಸ್, ಸುಗಮ‌, ಸಂಚಾರ, ತೊಂದರೆ, ಅಂತ್ಯ, ಇತಿಶ್ರೀ, ಯಾವಾಗ,

ದಾವಣಗೆರೆ: ದಾವಣಗೆರೆ ನಗರದ ಹಳೇ ಕೋರ್ಟ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಸರ್ಕಾರಿ ಹಾಗೂ ಖಾಸಾಗಿ ಬಸ್ ಗಳು ಬಸ್ತಾ ನಿಲ್ದಾಣದಿಂದ ಹೋರಗಡೆ ಹೋಗುವಾಗ ತಾ ಮುಂದು ನಾ ಮುಂದು ಎಂದು ಕುಸ್ತಿಗೆ ಬಿಳುತ್ತಿದ್ದಾರೆ.

ಜನತಾಬಜಾರ್ ಎದುರುಗಡೆಯ  ರಸ್ತೆಯಲ್ಲಿ ಪ್ರತಿ ನಿತ್ಯ ವಾಹನಗಳ ಪ್ರಯಾಣಿಕರ ಸಂಚಾರಕ್ಕೆ, ಹಾಗೂ ಪಾದಚಾರಿಗಳಿಗೆ ತೊಂದರೆ ಯಾಗುತ್ತಿದೆ. ಬಸ್ ನಿಲ್ದಾಣದಿಂದ ಹೊರ ಬರುವಾಗ ರಸ್ತೆಯಲ್ಲಿ ಪ್ರಯಾಣಿಕರನ್ನುಬಸ್ಸಿನಲ್ಲಿ ಹತ್ತಿಸಿಕೊಳ್ಳುತ್ತಾರೆ. ಎರಡು ಬಸ್ ನಿಲ್ದಾಣ ದವರು ಸಹ ಸೆಕ್ಯೂರಿಟಿ ವ್ಯವಸ್ಥೆ ಮಾಡಿಕೊಂಡಿಲ್ಲಾ,  ಅಲ್ಲದೇ ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ತೀವ್ರ ತೊಂದರೆ ಆಗುತ್ತಿರುವುದು ಕಂಡುಬರುತ್ತಿದೆ, ಕೆಲ ಖಾಸಗಿ ಬಸ್ಸಿನವರು ಕರ್ಕಶ್ ಹಾರ್ನ್ ಬಳಕೆ ಮಾಡುತ್ತಿದ್ದು ಇವರುಗಳ ಆಟೋಟಕ್ಕೆ ಇತಿಶ್ರೀ ಆಡುವವರು ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಇ ರಸ್ತೆಯಲ್ಲಿ ಆಟೋಗಳ ನಿಲುಗಡೆ ಸಹ ಹೆಚ್ಚಾಗಿದೆ.

ಸಂಚಾರಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸೂಚನೆಗಳನ್ನು ಸಹ ಪಾಲನೆ ಮಾಡುವುದಿಲ್ಲ ಈ ಬಸ್ಸಿನವರು. ನಿಲ್ದಾಣ ಗಳ ಸಮೀಪ ಆಟೋ ನಿಲುಗಡೆ. ಪುಟ್ ಪಾತ್ ನಲ್ಲಿ ಇರುವ ಅಂಗಡಿಗಳಿಂದ ಪಾದಚಾರಿಗಳು ನಡೆದುಕೊಂಡು ಹೋಗಲು ಹರ ಸಾಹಸ ಪಡಬೇಕಾಗಿದೆ. ಇನ್ನಾದರೂ ಸಹ ಮಹಾನಗರಪಾಲಿಕೆ ಹಾಗೀ ಪೊಲೀಸ್ ಇಲಾಖೆ ಇದರ ಕಡೆ ಗಮನಹರಿಸಿ ಕ್ರಮಜರುಗಿಸಬೇಕು ಎಂಬುದು ಸಾರ್ವಜನಿಕರ ಅಳಲು

Click to comment

Leave a Reply

Your email address will not be published. Required fields are marked *

Most Popular

To Top