ಸಿದ್ದೇಶ್ವರ್‌ಗೆ ನಾನೆ ಸೆಡ್ಡು ಹೊಡೆಯುವೆ

ದಾವಣಗೆರೆ: ಜಿಲ್ಲೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಎದುರು ನಾನೇ ಸೆಡ್ಡು ಹೊಡೆದು ಸ್ಪರ್ಧಿಸುತ್ತೇನೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಸೋಲುವುದನ್ನು ನೋಡಬೇಕಿದೆ. ಈ ಬಾರಿ ಅವರು ಟಿಕೆಟ್ ಪಡೆದು ಚುನಾವಣೆಗೆ ನಿಲ್ಲಲಿ ಎಂದು ಸವಾಲು ಹಾಕಿದ್ದಾರೆ.
ಮುಂಬರುವ ಸಂಸತ್ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಹಳ ಜನ ಇದ್ದಾರೆ. ಅವರಾರೂ ನಿಲ್ಲುವುದಿಲ್ಲ ಎಂದರೆ, ನಾನೇ ಸೆಡ್ಡು ಹೊಡೆಯುತ್ತೇನೆ. ಸಿದ್ದೇಶ್ವರ ಸಹ ನಿಲ್ಲಲಿ, ಬೇಕಾದರೆ ಅವರಿಗೆ ನಾವೇ ಫಂಡ್ ಕೊಡುತ್ತೇವೆ ಎಂದರು.
ಸಿದ್ದೇಶ್ವರ ಸಹ ನನ್ನ ಅಳಿಯ. ಬೊಮ್ಮಾಯಿ ಹೇಗೆ ಸಂಬಂಧಿಯೋ ಅವನೂ ನನ್ನ ಸಂಬಂಧಿ’ ಎಂದರು.