ರಾಜ್ಯ ಸುದ್ದಿ

ಬಾಲಕಿಯರಿಗೆ ಸ್ಕರ್ಟ್ ಬದಲಿಗೆ ಚೂಡಿ ಅಥವಾ ಪ್ಯಾಂಟ್ ಯೂನಿಫಾರಂ

ಬಾಲಕಿಯರಿಗೆ ಸ್ಕರ್ಟ್ ಬದಲಿಗೆ ಚೂಡಿ ಅಥವಾ ಪ್ಯಾಂಟ್ ಯೂನಿಫಾರಂ

ಬೆಂಗಳೂರು: ಬಾಲಕಿಯರ ಶಾಲಾ ಸಮವಸ್ತ್ರವನ್ನು ಸ್ಕರ್ಟ್‌ನಿಂದ ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ರಾಜ್ಯ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ.

ಕಲಬುರಗಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸ್ಕರ್ಟ್ ಧರಿಸುವ ಹುಡುಗಿಯರು ಎದುರಿಸುತ್ತಿರುವ ಅನಾನುಕೂಲತೆಗಳ ಕುರಿತು ಆಯೋಗಕ್ಕೆ ಪತ್ರ ಬರೆದ ನಂತರ ಶಿಫಾರಸು ಮಾಡಲಾಗಿದೆ.

ಮೇ 15ರಂದು ಬರೆದ ಪತ್ರದಲ್ಲಿ ಹುಡುಗಿಯರು ನಾಚಿಕೆ ಸ್ವಭಾವದರಾಗಿದ್ದು ಪ್ರಯಾಣಿಸುವಾಗ, ಜನನಿಬಿಡ ಪ್ರದೇಶಗಳಲ್ಲಿ ತಿರುಗಾಡುವಾಗ, ಸೈಕ್ಲಿಂಗ್ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಸ್ಕರ್ಟ್ ಧರಿಸುವುದು ಒಂದು ಅಡಚಣೆಯಾಗಿದೆ. ಇನ್ನು ಪತ್ರದಲ್ಲಿ ಲೈಂಗಿಕ ಕಿರುಕುಳದ ವರದಿಗಳಿವೆ ಎಂದು ಸೇರಿಸಲಾಗಿದೆ.

ಹುಡುಗಿಯರು ಸಾಮಾನ್ಯವಾಗಿ ಸ್ಕರ್ಟ್‌ಗಳನ್ನು ಧರಿಸುವುದರಿಂದ ಮುಜುಗರ ವ್ಯಕ್ತಪಡಿಸುತ್ತಾರೆ ಎಂದು ಉಲ್ಲೇಖಿಸಿ, ಅವರ ಸಮವಸ್ತ್ರವನ್ನು ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಸೂಚಿಸಿದೆ.

Click to comment

Leave a Reply

Your email address will not be published. Required fields are marked *

Most Popular

To Top