training; ಮಹಿಳಾ ಉದ್ಯಮಾಕಾಂಕ್ಷಿಗಳಿಗೆ  ತರಬೇತಿ ಶಿಬಿರ

ಇಂಟರ್‌ನ್ಯಾಷನಲ್‌

ದಾವಣಗೆರೆ, ಅ.27: ನಗರದ ಎ.ವಿ.ಕೆ ಕಾಲೇಜು ಹತ್ತಿರದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮಹಿಳಾ ಸಂಘದಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ  ಜಿಲ್ಲೆಯ ಆಸಕ್ತ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ ನವಂಬರ್ 15 ರಿಂದ 24 ರವರೆಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ (training) ಶಿಬಿರವನ್ನು ಆಯೋಜಿಸಲಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ  ಪ್ರಾಯೋಜಕತ್ವದಲ್ಲಿ ಸಿಡಾಕ್(ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳು 18 ರಿಂದ 55 ವರ್ಷ ವಯೋಮಾನದವರಾಗಿರಬೇಕು.

ಅಭ್ಯರ್ಥಿಗಳು 2 ಪಾಸ್‍ಪೋರ್ಟ್ ಅಳತೆಯ ಫೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ, ಜಂಟಿ ನಿರ್ದೇಶಕರ ಕಛೇರಿ, ಸಿಡಾಕ್, ಪ್ಲಾಟ್ ನಂ: 76ಎ-(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ, ದಾವಣಗೆರೆ.  ತರಬೇತಿದಾರರಾದ ವಿನಯ ಜಿ.ಕೆ. ಮೊ.ಸಂ: 9886115200  ಹಾಗೂ  ಬಸವರಾಜ ಜಿ. ಬಿ. ಮೊ.ಸಂ: 9164742033 ಸಂಪರ್ಕಿಸಲು ಸಿಡಾಕ್‍ನ ಜಿಲ್ಲಾ ಜಂಟಿ ನಿರ್ದೇಶಕರು ಆರ್.ಪಿ. ಪಾಟೀಲ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!