ಜನವರಿ 15ರಿಂದ 19ರವರೆಗೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 53ನೇ ವಾರ್ಷಿಕೋತ್ಸವ ಸಂಭ್ರಮ

ದಾವಣಗೆರೆ: ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 53ನೇ ವಾರ್ಷಿಕೋತ್ಸವ ಸಂಭ್ರಮವನ್ನು ಜನವರಿ 15ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರೆಗೆ 15ರಂದು ಬೆಳಗ್ಗೆ 10ಕ್ಕೆ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ಸಿದ್ಧಗಂಗಾ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದು, ಶೇ.90ಕ್ಕೂ ಹೆಚ್ಚು ಅಂಕ ಗಳಿಸಿರುವ ಎಸ್‌ಎಸ್‌ಎಲ್‌ಸಿ ಮತ್ತು ಸಿಬಿಎಸ್‌ಇ 10ನೇ ತರಗತಿಯ ಹಾಗೂ ದ್ವಿತೀಯ ಪಿಯುಸಿ ವಿಭಾಗದ ಒಟ್ಟು 636 ಮಕ್ಕಳಿಗೆ ಸಿದ್ಧಗಂಗಾ ಪ್ರಶಸ್ತಿ ನೀಡಿ ಪುರಸ್ಕರಿಸಾಗುವುದು. ಆಕರ್ಷಕ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ಪದಕವನ್ನು ನೀಡಿ ಪ್ರತಿ ವಿದ್ಯಾರ್ಥಿಗೆ ತಂದೆತಾಯಿ ಜೊತೆಗೆ ಗೌರವಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಜಿ.ಸಿ.ನಿರಂಜನ್ ಆಗಮಿಸಲಿದ್ದು, ಎಲ್.ವಿ.ಸುಬ್ರಹ್ಮಣು, ಗಣೇಶ್ ಭಟ್, ಆರ್.ಎಸ್.ಗಣೇಶ್ ಪ್ರಸಾದ್, ವಾಣಿಶ್ರೀ ಉಪಸ್ಥಿತರಿದ್ದು, ಜಸ್ಟಿನ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜನವರಿ 16,17,18,19ರ ನಾಲ್ಕು ದಿನಗಳ ವಾರ್ಷಿಕ ಸಂಭ್ರಮ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ರಾಜ್ಯ ಮಟ್ಟದ ಪ್ರತಿಷ್ಠಿತ ಎಂ ಎಸ್ ಎಸ್ ಕ್ವಿಜ್-2022 ರ ವಿಜೇತ 17 ಮಕ್ಕಳಿಗೆ ಬಹುಮಾನ ವಿತರಣೆ ಇದೆ. ಶಿಕ್ಷಣ ಶಿಲ್ಪಿ ಎಂ.ಎಸ್.ಶಿವಣ್ಣನವರ ಗೌರವಾರ್ಥ ಕಳೆದ ಎಂಟು ವರ್ಷಗಳಿಂದ ರಾಜ್ಯ ಮಟ್ಟದ ಲಿಖಿತ ಕ್ವಿಜ್ ನಡೆಸಲಾಗುತ್ತಿದೆ. 2022ರ ಕ್ವಿಜ್‌ನಲ್ಲಿ ಪ್ರಥಮ ಬಹುಮಾನ 25ಸಾವಿರ, ದ್ವಿತೀಯ ಬಹುಮಾನ 15ಸಾವಿರ ಮತ್ತು ತೃತೀಯ ಬಹುಮಾನ 10ಸಾವಿರ ಮತ್ತು 14 ಮಕ್ಕಳು ತಲಾ 1ಸಾವಿರ ಸಮಾಧಾನಕರ ಬಹುಮಾನ ಪಡೆಯಲಿದ್ದಾರೆ. ಇದರೊಂದಿಗೆ 45 ದತ್ತಿ ಪ್ರಶಸ್ತಿಗಳು ಪ್ರದಾನ ಮಾಡಲಾಗುವುದು ಎಂದರು.
ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಿ.ಡಿ.ಕುಂಬಾರ್ ಉದ್ಘಾಟಿಸುವರು. ಸಂಸ್ಥೆಯ ಹಿರಿಯ ವಿದಾರ್ಥಿನಿ ಶಿವಮೊಗ್ಗ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೀಣಾ ಪಿ ಮುಖ್ಯ ಅತಿಥೀಗಳಾಗಿ ಆಗಮಿಲಿಸಿದ್ದಾರೆ.
ಜನವರಿ 17ರ ಮಂಗಳವಾರ ಸಿದ್ಧಗಂಗಾ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆಯನ್ನು ಬೆಸ್ಕಾಂನ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಂತೇಶ್ ಬೀಳಗಿ ಆಗಮಿಸಲಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿನಿ ಕೆಪಿಟಿಸಿಎಲ್ ಎಕ್ಸಿಕ್ಯುಟಿವ್ ಇಂಜಿನಿಯರ್ ಶಾರದಾ ಅತಿಥಿಗಳಾಗಿರುತ್ತಾರೆ.
ಜನವರಿ 18ರ ಬುಧವಾರದ ಕಾರ್ಯಕ್ರಮದ ಉದ್ಘಾಟನೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕಿ ಡಾ.ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸುವರು. ನಾಡಿನ ಸಾಹಿತಿ ಬಿ.ಆರ್.ಲಕ್ಷö್ಮಣ ರಾವ್ ಮುಖ್ಯ ಅತಿಥಿಗಳಾಗಿದ್ದಾರೆ.
ಜನವರಿ 19ರ ಕಾರ್ಯಕ್ರಮ ಉದ್ಘಾಟನೆಯನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ ಉದ್ಘಾಟಿಸುವರು. ಎಸ್.ಎಸ್. ವೈದ್ಯಕೀಯ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ವಿನಯ್ ಎಸ್.ಅಪ್ಪಣ್ಣನವರ್ ಮುಖ್ಯ ಅತಿಥಿಗಳಾಗಿರುತ್ತಾರೆ. ಈ ಐದು ದಿನಗಳಲ್ಲಿ ಮಕ್ಕಳು ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 5 ಗಂಟೆಯಿಂದ ಸುಗಮ ಸಂಗೀತದಿಂದ ಪ್ರಾರಂಭವಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!