ಜ. 5ರಂದು 90ನೇ ರಾಜ್ಯ ಸರ್ವ ಸದಸ್ಯರ ಮಹಾಸಭೆ

90th State General Assembly on 5th January 2024

90th State General Assembly on 5th January 2024

ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಸಂಘದ 2022 -23ನೇ ಸಾಲಿನ 90ನೇ ಸರ್ವ ಸದಸ್ಯರ ಮಹಾಸಭೆಯನ್ನು 2024ರ ಜನವರಿ 5ರಂದು ಬೆಳಿಗ್ಗೆ 11 ಮಂಗಳೂರಿನ ಅಡ್ಡಾರ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿ ಜಿ ಸಿ ಲೋಕೇಶ್ ರವರ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಇ. ಎಂ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ವ ಸದಸ್ಯರ ಸಭೆಯಲ್ಲಿ ಸಭೆಯ ತಿಳುವಳಿಕೆ ಪತ್ರವನ್ನು ಓದಿ ದಾಖಲು ಮಾಡುವುದು, 2022 -23ನೇ ಸಾಲಿನ ವಾರ್ಷಿಕ ವರದಿ ಮಂಡನೆ ಹಾಗೂ ಅನುಮೋದನೆ ಮತ್ತು 2022- 23ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಮಂಡನೆ ಹಾಗೂ ಅನುಮೋದನೆ ಪಡೆಯಲಾಗುವುದು.

ಕರ್ನಾಟಕ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಎಂಬ ಹೆಸರನ್ನು ಆಡಳಿತ ಭಾಷೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಎಂದು ಬೈಲಾದ ಶಿರೋನಾಮೆಯಲ್ಲಿ ತಿದ್ದುಪಡಿ ಬಗ್ಗೆ, ದಾವಣಗೆರೆಯಲ್ಲಿ ನಡೆಯುವ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸಿದ್ಧತಾ ವಿಚಾರ ಸೇರಿದಂತೆ ಇನ್ನಿತರೆ ವಿಷಯಗಳನ್ನು ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸಲಾಗುತ್ತದೆ.

ಸಭೆಯಲ್ಲಿ ಸರ್ವ ಸದಸ್ಯರು ಭಾಗವಹಿಸಬಹುದು ಇದಲ್ಲದೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಬಯಸುವವರು ವಿಷಯಸೂಚಿಯನ್ನು ಲಿಖಿತವಾಗಿ ಡಿಸೆಂಬರ್ 26ರ ಒಳಗೆ ರಾಜ್ಯ ಘಟಕಕ್ಕೆ ಕಳುಹಿಸಿಕೊಡಬೇಕು. ಇದಲ್ಲದೆ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಲು ಸಂಘದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಸಂಘದ ಸದಸ್ಯತ್ವ ಹೊಂದಿರುವ ಎಲ್ಲಾ ಪತ್ರಕರ್ತರು ಈ ಮಹಾಸಭೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಖಜಾಂಚಿ ಎನ್. ವಿ. ಬದರಿನಾಥ್ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!