ಅಪರಾಧ

Sand: ದಾವಣಗೆರೆಯಲ್ಲಿ ಮಧ್ಯರಾತ್ರಿ ಡಿಸಿ ಮನೆ ಬಳಿ ಮರಳು ಲಾರಿ ಜಪ್ತಿ: ಅಕ್ರಮ ಸಾಗಾಟ ಜಾಲ ತಡೆದ ವಿದ್ಯಾನಗರ ಪೋಲೀಸ್.!?

Share
Share

ದಾವಣಗೆರೆ: (Sand) ನಗರದಲ್ಲಿ ಅಕ್ರಮ ಮರಳು ದಂಧೆ ಮತ್ತೆ ಹೆಡೆ ಎತ್ತುತ್ತಿದೆಯೇ ಎಂಬ ಅನುಮಾನ ಮೂಡಿಸುವಂತೆ, ವಿದ್ಯಾನಗರ ಪೊಲೀಸರು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಮರಳನ್ನು ತುಂಬಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

*ಘಟನೆಯ ವಿವರ:*
ಕಳೆದ ಏಪ್ರಿಲ್ 27ರ ಸೋಮವಾರ ಮಧ್ಯರಾತ್ರಿ ಸುಮಾರು 12:10ರ ಸಮಯದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ರಿಂಗ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಡಿಸಿ ಕಚೇರಿ ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯನ್ನು (ನಂಬರ್: HR 69-C-1500) ಅನುಮಾನದ ಮೇಲೆ ಬೆನ್ನಟ್ಟಿದ ಪೊಲೀಸರು ನವೋದಯ ಶಾಲೆಯ ಶುದ್ಧ ನೀರಿನ ಘಟಕದ ಬಳಿ ತಡೆದು ತಪಾಸಣೆ ನಡೆಸಿದ್ದಾರೆ.

*ಪರವಾನಗಿ ಇಲ್ಲದ ಸಾಗಾಟ:*
ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ಅಂದಾಜು 10 ಟನ್ ಮರಳು ಪತ್ತೆಯಾಗಿದೆ. ವಾಹನ ಚಾಲಕ ಸೈಯದ್ ದಾದಾಪೀರ್ @ ಚಾಂದ್ ಎಂಬಾತನನ್ನು ವಿಚಾರಿಸಿದಾಗ, ಈ ಮರಳನ್ನು ಹೊನ್ನಾಳಿ ತಾಲೂಕಿನ ಚಿಕ್ಕ ಬಾಸೂರು ಗ್ರಾಮದ ಹಳ್ಳದಿಂದ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕಳ್ಳತನದಿಂದ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ನಗರಕ್ಕೆ ಮರಳನ್ನು ತರಲಾಗುತ್ತಿತ್ತು ಎಂದು ಆರೋಪಿತನು ಒಪ್ಪಿಕೊಂಡಿದ್ದಾನೆ.

*ಪೊಲೀಸ್ ಕ್ರಮ:*
ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಟಿಪ್ಪರ್ ಲಾರಿ ಹಾಗೂ 20 ಸಾವಿರ ರೂಪಾಯಿ ಮೌಲ್ಯದ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸೈಯದ್ ದಾದಾಪೀರ್ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ *BNS ಕಲಂ 303(2)* ರಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ನಗರದ ಹೊರವಲಯದ ರಿಂಗ್ ರಸ್ತೆಗಳು ಅಕ್ರಮ ಚಟುವಟಿಕೆಗಳ ಹಾದಿಯಾಗುತ್ತಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.

ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಆರೋಪಿ ಚಾಂದ್ ಎಂಬುವವರನ್ನು ಬಂಧಿಸಲಾಗಿದ್ದು, ನಂತರ ನ್ಯಾಯಾಲಯದ ಆದೇಶದ ಮೇರೆಗೆ ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ, ಅಲ್ಲದೇ ಈ ವ್ಯಕ್ತಿ ಅಕ್ರಮ ಮರಳು ಸಾಗಾಟದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯ / ಕರ್ನಾಟಕ

DYSP: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಸರ್ಜರಿ: 74 ಡಿವೈಎಸ್‌ಪಿಗಳ ವರ್ಗಾವಣೆ – ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಬೆಂಗಳೂರು:(DYSP) ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ನಡೆಸಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಒಟ್ಟು 74 ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ವಿವಿಧ ಸ್ಥಳಗಳಿಗೆ ನಿಯೋಜಿಸಿ...

ದಾವಣಗೆರೆ

DCM: ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ: ಉದ್ಯಮಿ ಎನ್. ಬಕ್ಕೇಶ್ ಒತ್ತಾಯ

ದಾವಣಗೆರೆ:(DCM) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯದ ಬೆಂಬಲ ಪ್ರಮುಖ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಸಮುದಾಯದ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು...

Related Articles
ಅಪರಾಧದಾವಣಗೆರೆ

Robbery: ದಾವಣಗೆರೆಯಲ್ಲಿ ವ್ಯಾಪಾರಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ: ಕೃತ್ಯ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ದಾವಣಗೆರೆ: (Robbery)  ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ಮಾತುಕತೆ ನೆಪದಲ್ಲಿ ಕರೆದೊಯ್ದು, ಕೊಠಡಿಯೊಂದರಲ್ಲಿ ಬಂಧಿಸಿ 10...

ಅಪರಾಧರಾಜಕೀಯರಾಜ್ಯ / ಕರ್ನಾಟಕ

ED: ಕರ್ನಾಟಕ ಸಚಿವ ಸತೀಶ್ ಜಾರಕಿಹೊಳಿ ಆಸ್ತಿಗಳ ಮೇಲೆ ಇ.ಡಿ ದಾಳಿ: ಇ ಡಿ ಮಹತ್ವದ ಮಾಹಿತಿ ಬಿಡುಗಡೆ

ಬೆಂಗಳೂರು: (ED) ಕರ್ನಾಟಕದ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸೇರಿದ...

ದಾವಣಗೆರೆಅಪರಾಧರಾಜ್ಯ / ಕರ್ನಾಟಕ

Sand: ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಭಾರಿ ಅಕ್ರಮ ಮರಳು ದಂಧೆ ಶಂಕೆ! ನಿಷೇಧಿತ ಯಂತ್ರಗಳು, ತೆಪ್ಪ ಬಳಸಿ ಮರಳು ಲೂಟಿ!

ಹರಿಹರ (Sand):ದಾವಣಗೆರೆ ಜಿಲ್ಲೆಯ ಹರಿಹರ ನಗರ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ...