ದಾವಣಗೆರೆ

DCM: ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ: ಉದ್ಯಮಿ ಎನ್. ಬಕ್ಕೇಶ್ ಒತ್ತಾಯ

Share
Share

ದಾವಣಗೆರೆ:(DCM) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯದ ಬೆಂಬಲ ಪ್ರಮುಖ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಸಮುದಾಯದ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಉದ್ಯಮಿ ಎನ್. ಬಕ್ಕೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

​ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಲ್ಪಸಂಖ್ಯಾತರು, ಕುರುಬರು ಹಾಗೂ ಹಿಂದುಳಿದ ವರ್ಗಗಳು ಮೊದಲಿನಿಂದಲೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾಗಿದ್ದಾರೆ. ಹಿಂದೆ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಲಿಂಗಾಯತ ಮತದಾರರು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಶಕ್ತಿ ನೀಡುತ್ತಿದ್ದರು. ಮಧ್ಯಂತರದಲ್ಲಿ ಸಮುದಾಯವು ಬಿಜೆಪಿಯತ್ತ ಒಲವು ತೋರಿತ್ತಾದರೂ, ಅಲ್ಲಿನ ದುರಾಡಳಿತದಿಂದ ಬೇಸತ್ತು 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.

​ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಹಾಗೂ ಎಂ.ಬಿ. ಪಾಟೀಲ್ ಅಂತಹ ನಾಯಕರು ಪಕ್ಷದಲ್ಲಿದ್ದ ಕಾರಣ ಸಮುದಾಯವು ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ದಾವಣಗೆರೆಯಲ್ಲಿಯೂ ಸಹ ಯಜಮಾನ್ ಮೋತಿ ವೀರಣ್ಣನವರ ಕಾಲದಿಂದಲೂ ಇಂದಿನ ಉಪ ಚುನಾವಣೆಯವರೆಗೂ ಲಿಂಗಾಯತ ಮತದಾರರು ಪಕ್ಷದ ಜೊತೆ ನಿಂತಿದ್ದಾರೆ ಎಂದಿದ್ದಾರೆ.

​ದೂರದೃಷ್ಟಿಯುಳ್ಳ ಹಾಗೂ ಅಜಾತಶತ್ರುವಾಗಿರುವ ಎಸ್.ಎಸ್. ಮಲ್ಲಿಕಾರ್ಜುನ ಅವರು ಬಡವರ ಬಗ್ಗೆ ಕಳಕಳಿ ಹೊಂದಿರುವ ಗಟ್ಟಿ ನಾಯಕರಾಗಿದ್ದಾರೆ. ಜಾತ್ಯತೀತವಾಗಿ ಎಲ್ಲ ಸಮಾಜದವರನ್ನು ಗೌರವಿಸುವ ಅವರಿಗೆ ಮುಂಬರುವ ದಿನಗಳಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಸರ್ಕಾರ ಸಮುದಾಯವನ್ನು ಗೌರವಿಸಬೇಕು ಎಂದು ಬಕ್ಕೇಶ್ ಅವರು ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆರಾಜ್ಯ / ಕರ್ನಾಟಕ

Transfer:ದಾವಣಗೆರೆಯ ದಕ್ಷ ಅಧಿಕಾರಿ ಗಾಯತ್ರಿ ವರ್ಗಾವಣೆ: ಈ ಹಿಂದೆ ಕಾಂಗ್ರೆಸ್ ಮುಖಂಡನ ಪುತ್ರರ ಬಂಧಿಸಿ ಸುದ್ದಿಯಾಗಿದ್ದ ಇನ್ಸ್‌ಪೆಕ್ಟರ್

ದಾವಣಗೆರೆ: (Transfer) ಕರ್ನಾಟಕ ಪೊಲೀಸ್ ಇಲಾಖೆಯ ಇತ್ತೀಚಿನ ವರ್ಗಾವಣೆ ಆದೇಶದನ್ವಯ, ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಾಯತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರನ್ನು ಬಳ್ಳಾರಿ ಜಿಲ್ಲೆಯ...

ರಾಜ್ಯ / ಕರ್ನಾಟಕ

DYSP: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಸರ್ಜರಿ: 74 ಡಿವೈಎಸ್‌ಪಿಗಳ ವರ್ಗಾವಣೆ – ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಬೆಂಗಳೂರು:(DYSP) ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ನಡೆಸಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಒಟ್ಟು 74 ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ವಿವಿಧ ಸ್ಥಳಗಳಿಗೆ ನಿಯೋಜಿಸಿ...

Related Articles
ಅಪರಾಧದಾವಣಗೆರೆ

Robbery: ದಾವಣಗೆರೆಯಲ್ಲಿ ವ್ಯಾಪಾರಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ: ಕೃತ್ಯ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ದಾವಣಗೆರೆ: (Robbery)  ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ಮಾತುಕತೆ ನೆಪದಲ್ಲಿ ಕರೆದೊಯ್ದು, ಕೊಠಡಿಯೊಂದರಲ್ಲಿ ಬಂಧಿಸಿ 10...

ದಾವಣಗೆರೆರಾಜ್ಯ / ಕರ್ನಾಟಕ

IGP: ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ಎನ್. ಸತೀಶ್ ಕುಮಾರ್ ವರ್ಗಾವಣೆ

ದಾವಣಗೆರೆ: (IGP) ಕರ್ನಾಟಕ ಸರ್ಕಾರವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಹಿರಿಯ ಐಪಿಎಸ್ ಅಧಿಕಾರಿ...

ದಾವಣಗೆರೆರಾಜ್ಯ / ಕರ್ನಾಟಕ

Lokayukta SP: ದಾವಣಗೆರೆ ನೂತನ ಲೋಕಾಯುಕ್ತ ಎಸ್‌ಪಿಯಾಗಿ ಆ್ಯಂಟನಿ ಜಾನ್ ಅಧಿಕಾರ ಸ್ವೀಕಾರ: ದೂರು ಸಲ್ಲಿಕೆಗೆ ಕರೆ

ದಾವಣಗೆರೆ: (Lokayukta SP) ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ಆ್ಯಂಟನಿ ಜಾನ್ ಜೆ.ಕೆ...