ನಟಿ ರಚಿತಾ ರಾಮ್ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಲು ಆಗ್ರಹ
ಮಂಡ್ಯ: ಗಣ ರಾಜ್ಯೋತ್ಸವ ಮರೆತು ಕ್ರಾಂತ್ಯೋತ್ಸವ ಆಚರಿಸಿ ಎಂದು ಬಹಿರಂಗವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಚಿತ್ರ ನಟಿ ರಚಿತಾ ರಾಮ್ ಅವರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸುವಂತೆ ಹಾಗೂ ಗಡಿಪಾರು ಮಾಡುವಂತೆ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಮಂಡ್ಯ ಜಿಲ್ಲೆ ಹಾಗೂ ಮದ್ದೂರು ತಾಲ್ಲೂಕು ಘಟಕ ಒತ್ತಾಯಿಸಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದೆ.
ಕೆಲ ದಿನಗಳ ಹಿಂದೆ ಕ್ರಾಂತಿ ಸಿನಿಮಾದ ಬಹಿರಂಗ ಸಭೆಯಲ್ಲಿ ರಚಿತಾ ರಾಮ್ ಜನವರಿ ೨೬ ರ ಗಣ ರಾಜ್ಯೋತ್ಸವ ಮರೆತು ಕ್ರಾಂತ್ಯೋತ್ಸವ ಆಚರಿಸಿ ಎಂದು ಹೆಳಿಕೆ ನೀಡಿ ತಮ್ಮ ಎಲುಬಿಲ್ಲದ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಎಂ.ಸಿ. ಬಸವರಾಜು, ಮಹೇಂದ್ರ ಡಿ.ಸಿ., ಶಿವರಾಜು ಎಂ.ಸಿ. ಕಿಡಿಕಾರಿದ್ದಾರೆ