ದಾವಣಗೆರೆ : ಯುವಕನನ್ನು ಕೋಣೆಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ

ದಾವಣಗೆರೆ : ಜಿಲ್ಲೆಯಲ್ಲಿ ಉತ್ತರ ಭಾರತದ ರೀತಿಯಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಕಟ್ಟಿಗೆ ತುಂಡಿನಿಂದ ಯುವಕನಿಗೆ ಹೊಡೆದು ಹಲ್ಲೆ ಮಾಡಿ, ನಂತರ ತಲೆ ಬೊಳಿಸಿ ಹಿಂಸೆ ನೀಡಿದ ವಿಡಿಯೋ ವೈರಲ್​ ಆಗಿದೆ. ಇನ್ನು ಹಲ್ಲೆ ಮಾಡಿದವರು ಹಾಗೂ ಹಲ್ಲೆಗೊಳಗಾದ ಯುವಕ ಒಂದೇ ಕೋಮಿಗೆ ಸೇರಿದವರಾಗಿದ್ದು, ಕಟ್ಟಿಗೆ ತುಂಡಿನಿಂದ ಯುವಕನಿಗೆ ಹೊಡೆದು ಹಲ್ಲೆ ಮಾಡಿ, ನಂತರ ತಲೆ ಬೊಳಿಸಿ ಹಿಂಸೆ ನೀಡಿದ ವಿಡಿಯೋ ವೈರಲ್​ ಆಗಿದೆ. ಈ ಬಗ್ಗೆ ‌ಪೊಲೀಸರಿಗೆ ಹಲ್ಲೆಗೊಳಗಾದ ಯುವಕ ಅಧಿಕೃತ ದೂರು ನೀಡದ ಹಿನ್ನಲೆ ಇದುವರೆಗೂ ಹಲ್ಲೆಗೆ ನಿಖರ ಕಾರಣ ತಿಳಿದಿಲ್ಲ. ಇದೀಗ ಪ್ರಕರಣದ ಪತ್ತೆಗೆ ಮುಂದಾದ ‌ಹರಿಹರದ ಪೊಲೀಸರು, ಹಲ್ಲೆಗೊಳಗಾದ ಯುವಕನ ವಿಳಾಸ ಶೋಧಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!