24 ಗಂಟೆಯೊಳಗೆ ‘ಕೈ’ ಬಿಟ್ಟು ಪುನಃ ಕಮಲ ಹಿಡಿದ ಹರಿಹರದ ABM ವಿಜಯ್
ದಾವಣಗೆರೆ : ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಹರಿಹರ ವಿಧಾನಸಭಾ ಕ್ಷೇತ್ರದ ಅಮರಾವತಿಯ ಪ್ರಭಾವಿ ಮುಖಂಡ ಹಾಗೂ ಹರಿಹರ ನಗರಸಭೆ ಸದಸ್ಯ ಎ.ಬಿ.ಎಂ. ವಿಜಯ್‌ಕುಮಾರ್ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕರ ಬಿ.ಪಿ.ಹರೀಶ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಮರಳಿ ಮಾತೃಪಕ್ಷ ಬಿ.ಜೆ.ಪಿ ಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಒ.ಬಿ.ಸಿ.ಮೋರ್ಚಾ ರಾಜ್ಯ ಉಪಾದ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪುರಸಭಾ ಸದಸ್ಯೆ ಅಶ್ವಿನಿ ಕೃಷ್ಣ, ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಎ.ಸಿ.ಆನಂದ್, ಮಲ್ಲಿಕಾರ್ಜುನ್ ಕಿರಣ್ ಮೂಲಿಮನೆ, ಅದೈತ್ ಶಾಸ್ತ್ರಿ, ರಮೇಶ್ ನಂದಿಗಾವಿ, ರವಿ ರಾಯ್ಕರ್, ಅಶ್ವಿನಿ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.