ಪತ್ರಿಕೆಗಳಿಗೆ ಜಾಹಿರಾತು, ಅನುದಾನ ಬಿಡುಗಡೆಗೆ ಮನವಿ

ಪತ್ರಿಕೆಗಳಿಗೆ ಜಾಹಿರಾತು, ಅನುದಾನ ಬಿಡುಗಡೆಗೆ ಮನವಿ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ, ಬಿ.ಬಿ.ಎಂ.ಪಿ.ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರನ್ನು ಬೆಂಗಳೂರುನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಸತ್ಯನಾರಾಯಣ್ ರವರು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಜಾಹಿರಾತಿಗಾಗಿ ಎರಡು ಕೋಟಿ ಅನುದಾನ ಮೀಸಲು ಇಡಬೇಕು ಎಂದು ಮನವಿ ಸಲ್ಲಿಸಿದರು.

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ನಡೆಸುವುದು ಬಹಳ ಕಷ್ಟಕರ.

ವಾರ ಪತ್ರಿಕೆ,ಪಾಕ್ಷಿಕ ಪತ್ರಿಕೆ ಮಾಸಪತ್ರಿಕೆಗಳು ಆರ್.ಎನ್.ಐ.ಸಂಸ್ಥೆಯಲ್ಲಿ ನೋಂದಣೆ ಮಾಡಿಕೊಂಡಿರುತ್ತಾರೆ.

ಪತ್ರಿಕೆ ನಡೆಸುವುದು ಸುಲಭ ಸಾಧ್ಯವಿಲ್ಲ ,ಇಂದಿನ ಸಂದರ್ಭದಲ್ಲಿ ಜಾಹಿರಾತು ಪ್ರತಿ ತಿಂಗಳು ಲಭಿಸಬೇಕು ಪತ್ರಿಕೆಗಳು ಜೀವಂತವಾಗಿ ಇರಲು ಸಾಧ್ಯ.

ಕಳೆದ ಸಾಲಿನಲ್ಲಿ 1ಕೋಟಿ ರೂ ಸಣ್ಣ,ಮಧ್ಯಮ ಪತ್ರಿಕೆ ಗಳಿಗೆ ಜಾಹಿರಾತು ಅನುದಾನ ಮೀಸಲು ಇಟ್ಟಿದ್ದರು.

ಅದರೆ ಬೃಹತ್ ಬೆಂಗಳೂರುನಗರ ವ್ಯಾಪ್ತಿ ದೊಡ್ಡ ಪ್ರದೇಶವಾಗಿದ್ದು.

ಪತ್ರಿಕೆಗಳ ಸಂಖ್ಯೆಗಳ ಹೆಚ್ಚಳವಿದೆ ಅದರಿಂದ 2022-23ನೇ ಸಾಲಿನಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆ ಎರಡು ಕೋಟಿ ಅನುದಾನ ಮೀಸಲು ಇಡಬೇಕು ಎಂದು ಮನವಿ ಸಲ್ಲಿಸಿದರು.

ಪತ್ರಿಕಾ ಸಂಪಾದಕರುಗಳಾದ ಸೋಮಶೇಖರ್ ಗಾಂಧಿ,ಹುಲಿ ಅಮರನಾಥ್,ಎನ್.ಸ್ವಾಮಿ,ನಾರಾಯಣ್, ಎ.ವಿಜಯಕುಮಾರ್, ಬಿ.ಟಿ.ಶ್ರೀನಿವಾಸ್,ನಟೇಶ್, ಗಗನ್ ಕುಮಾರ್, ಕೆ.ಎಸ್.ಸ್ವಾಮಿ,
ಮಹಭಾವಿಮಠ, ಅಂಜನಪ್ಪ,ಜಕ್ರೀಯ,ನಾಗೇಶ್ ,ಮಲ್ಲಿಕಾರ್ಜುನ್ ಕಬ್ಬೂರುರವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!