ಮನೆ ಗೋಡೆ ಕುಸಿದು ಸಾವನ್ನಪ್ಪಿದ ಒಂದು ವರ್ಷದ ದುರ್ದೈವಿ ಹೆಣ್ಣು ಮಗು

ಮನೆ ಗೋಡೆ ಕುಸಿದು ಸಾವನ್ನಪ್ಪಿದ ಒಂದು ವರ್ಷದ ದುರ್ದೈವಿ ಹೆಣ್ಣು ಮಗು

ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ನಿರಂತರ ಕುಂಭದ್ರೋಣ ಮಳೆ ಪರಿಣಾಮ, ಮನೆ ಗೋಡೆ ಕುಸಿದು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ತಂದೆಗೆ ಗಾಯವಾಗಿದ್ದು, ಜಿಲ್ಲಾ ಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೂರ್ತಿ(01) ಸಾವನ್ನಪ್ಪಿದ ದುರ್ದೈವಿ ಹೆಣ್ಣು ಮಗು. ಕೆಂಚಪ್ಪ (32) ಗಾಯಗೊಂಡ ತಂದೆ. ಕಳೆದ ಮೂರು‌ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಮಳೆಗೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಮನೆ ಕುಸಿದಿದೆ. ರಾತ್ರಿ ವೇಳೆ ಕೆಂಚಪ್ಪ ಮಗು ಸ್ಪೂರ್ತಿ ಹಾಗೂ‌ ಪತ್ನಿ ಲಕ್ಷ್ಮಿ ಮಲಗಿಕೊಂಡ ವೇಳೆ ಗೋಡೆ ಕುಸಿದಿದೆ‌.ಮಲೇಬೆನ್ನೂರು‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!