ಅಲ್ಪಸಂಖ್ಯಾತರ ಉದ್ಯೋಗಸ್ಥ ಮಹಿಳಾ ವಸತಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ 

ದಾವಣಗೆರೆ: 2022-23ನೇ ಸಾಲಿನ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ದುಡಿಯುವ ಮಹಿಳೆಯರ ಸುರಕ್ಷತೆಯ ಹಿತದೃಷ್ಟಿಯಿಂದ ಉದ್ಯೋಗಸ್ಥ ಮಹಿಳಾ ವಸತಿನಿಲಯವನ್ನು ಪ್ರಾರಂಭಿಸಲಾಗಿದ್ದು ಪ್ರವೇಶಕ್ಕಾಗಿ ಅರ್ಹ ಅಲ್ಪಸಂಖ್ಯಾತರ ಉದ್ಯೋಗ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಸತಿನಿಲಯದಲ್ಲಿ ಉಚಿತವಾಗಿ ಮೂಲಭೂತ ಸೌಕರ್ಯ ಮತ್ತು ವಸತಿಯನ್ನು ನೀಡಲಾಗುವುದು. ಅಲ್ಪಸಂಖ್ಯಾತರ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಪಾರ್ಸಿ ಜನಾಂಗದ ಆಸಕ್ತಿಯುಳ್ಳ ಹಾಗೂ ಅರ್ಹ ಅಲ್ಪಸಂಖ್ಯಾತರ ಉದ್ಯೋಗಸ್ಥ ಮಹಿಳೆಯರು ಜೂನ್.30 ರೊಳಗಾಗಿ ನಗರದ ಕುಂದುವಾಡ ರಸ್ತೆ ಹತ್ತಿರ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ಕಛೇರಿಯಲ್ಲಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ :08192-250022, 8861042302 ಯನ್ನು ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!