ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ದಾವಣಗೆರೆ : 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮೂದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ) ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಅಂಕಗಳಿಸಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ (SSP) ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಆಹ್ವಾನಿಸಿದ್ದು, ಅದರಂತೆ 2021-22ನೇ ಸಾಲಿನಲ್ಲಿ ಈ ಹಿಂದೆ (NSP)ಯಲ್ಲಿ ಅರ್ಜಿ ಸಲ್ಲಿಸಿರುವ ಮೆಟ್ರಿಕ್ ಪೂರ್ವ 1ನೇ ತರಗತಿ ಯಿಂದ 10ನೇ ತರಗತಿಯವರೆಗೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಜೂನ್.15 ರೊಳಗಾಗಿ ಆನ್ ಲೈನ್ ವೆಬ್ ಸೈಟ್ www.ssp.karnataka.gov.inನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ವೆಬ್ ಸೈಟ್: www.dom.karnataka.gov.in ಮತ್ತು ಸಹಾಯವಾಣಿ ಸಂಖ್ಯೆ: 8277799990ಗೆ ಸಂಪರ್ಕಿಸಬಹುದಾಗಿದೆಂದು ದಾವಣಗೆರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
garudavoice21@gmail.com 9740365719