award; ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

ದಾವಣಗೆರೆ, ನ.8: ಪ್ರಸಕ್ತ ಸಾಲಿನ ಮೇಜರ್ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿ (award), ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿ, ರಾಷ್ಟ್ರೀಯ ಖೇಲ್ ರತ್ನ ಪುರಸ್ಕಾರ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶಸ್ತಿ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅರ್ಹರಾಗಿರುವ ಕ್ರೀಡಾಪಟುಗಳು, ತರಬೇತುದಾರರು ಮತ್ತು ಘಟಕಗಳು ಅಧಿಕಾರಿಗಳ ಶಿಫಾರಸ್ಸುಗಳಿಲ್ಲದೆ ಸ್ವಯಂ ಅರ್ಜಿಯನ್ನು ಆನ್‍ಲೈನ್ ಮುಖಾಂತರ ಸಲ್ಲಿಸಬಹುದು. ಅರ್ಜಿಯನ್ನು ಆನ್‍ಲೈನ್  dbtyas-sports.gov.in  ಮುಖಾಂತರ ನ.10 ರೊಳಗಾಗಿ ಸಲ್ಲಿಸಬೇಕು.

city rounds; ಜನತೆಯ ಸಂಕಷ್ಟ ಆಲಿಸಿದ ಚನ್ನಗಿರಿ ಶಾಸಕ ಬಸವರಾಜು ವಿ ಶಿವಗಂಗಾ

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 011-23387432 ಅಥವಾ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಗಳು : 1800-202-5155 ಮತ್ತು 1800-258-5155 ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!