application; ಕಲ್ಯಾಣ ಸಂಘಟಿಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ದಾವಣಗೆರೆ; ಸೆ.06 : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ 14 ಕಲ್ಯಾಣ ಸಂಘಟಿಕರ ಸಿ ವೃಂದದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ (application) ಸಲ್ಲಿಸಲು ಸೆ.9 ರವರೆಗೆ ವಿಸ್ತರಿಸಲಾಗಿದೆ.
ಭೂ ಸೇನೆಯ ಜೆ.ಸಿ.ಓ ರ್ಯಾಂಕ್ ಹಾಗೂ ವಾಯುಪಡೆ ಮತ್ತು ನೌಕಾಪಡೆಯ ತತ್ಸಮಾನವಾದ ರ್ಯಾಂಕ್‍ನಿಂದ ಸೇವಾ ನಿವೃತ್ತಿ ಹೊಂದಿರುವ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು. ದೂ. 080-25589459ಗೆ ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ ಹಿರೇಮಠ್ ತಿಳಿಸಿದ್ದಾರೆ.