ಅತ್ಯಾಚಾರ ಪ್ರಕರಣದ ಆರೋಪಿಯ ಬಂಧನ : ಅಧಿಕಾರಿ ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಶ್ಲಾಘನೆ.

ಅವಳಿ ಮಕ್ಕಳ ಬಾಯಿಗೆ ಟೇಪ್ ಸುತ್ತಿ ಸಾಯಿಸಿದ ಕ್ರೂರಿ ತಂದೆ: ಬಂಧಿಸಿದ ಪೊಲೀಸರು

ದಾವಣಗೆರೆ: ಆರೋಪಿಯಾದ ದಾವಣಗೆರೆ ಜಯನಗರದ ಚರ್ಚ್‌ ಪಾದ್ರಿಯಾದ ರಾಜಶೇಖರ ಎಂಬವರು ಪಿರ‍್ಯಾದಿಯ ಮೇಲೆ ಅತ್ಯಾಚಾರ ಮಾಡಿರುವುದರಿಂದ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ :೨೬/೨೦೨೪ ಕಲಂಃ ೩೭೬,(೨)(ಎನ್), ೩೫೪(ಎ), ೩೨೩,೫೦೪,೫೦೬,೪೧೭,೪೨೦ ಐಪಿಸಿ ಹಾಗೂ ೩(೧)(ಆರ್),೩(೨)(ಎಸ್),೩(೨)(ವಿ),೩(೨)(ವಿ-ಎ) ಎಸ್‌ಸಿ/ಎಸ್‌ಟಿ ಎಕ್ಟ್ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಯ ಪತ್ತೆಗಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ, ಸಂತೋಷ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ ಮಂಜುನಾಥ ರವರ ಮಾರ್ಗದರ್ಶನದ ಮೇರೆಗೆ ಶ್ರೀ ಮಲ್ಲೇಶ ದೊಡ್ಡಮನಿ, ಪೊಲೀಸ್ ಉಪಾಧೀಕ್ಷಕರು ನಗರ ಉಪ ದಾವಣಗೆರೆ ರವರ ನೇತೃತ್ವದಲ್ಲಿ ಶ್ರೀ ಎಸ್,ಡಿ ನೂರ್ ಅಹಮ್ಮದ್. ಪಿಐ ಹಾಗೂ ಮಹಿಳಾ ಠಾಣಾ ಸಿಬ್ಬಂದಿಯವರಾದ ಶ್ರೀ ರಸೂಲ್ ಸಾಬ್, ಶ್ರೀ ಮುತ್ತಪ್ಪ ಬಿ ಮಡ್ಲೂರ್ ಹಾಗೂ ಶ್ರೀ ರಮೇಶ್ ಜಿಲ್ಲಾ ಪೊಲೀಸ್ ಕಛೇರಿಯ ಶ್ರೀ ರಾಘವೇಂದ್ರ ರವರನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದರು.

ಖಚಿತ ಮಾಹಿತಿ ಮೇರೆಗೆ ಪ್ರಕರಣದ ಆರೋಪಿಯ ನ್ನು ಆಂಧ್ರಪ್ರದೇಶ ರಾಜ್ಯದ ಹೈದ್ರಾಬಾದ್ ನಗರದಲ್ಲಿ ಪತ್ತೆ ಮಾಡಿ, ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಅತ್ಯಾಚಾರದಂತಹ ಗಂಭೀರ ಮತ್ತು ಘೋರ ಪ್ರಕರಣಗಳು ಸಮಾಜದ ಸ್ವಾಸ್ಥತೆಯನ್ನು ಕದಡುವಂತಹ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ದಾವಣಗೆರೆ ಜಯನಗರದ ಚರ್ಚ ಪಾದ್ರಿ ರಾಜಶೇಖರ ರವರನ್ನು ಬಂಧಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಅಧಿಕಾರಿ ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ರವರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!