ಒಂದೇ ದಿನ ಎರಡು ಕಡೆ ಸರಕಳ್ಳತನ ಮಾಡಿದ್ದ ಇಬ್ಬರು ಖದೀಮರ ಬಂಧನ

ಒಂದೇ ದಿನ ಎರಡು ಕಡೆ ಸರಕಳ್ಳತನ ಮಾಡಿದ್ದ ಇಬ್ಬರು ಖದೀಮರ ಬಧನ

ದಾವಣಗೆರೆ: ವಿದ್ಯಾನಗರ ಹಾಗೂ ಆಂಜನೇಯ ಬಡಾವಣೆಯಲ್ಲಿ ಒಂದೇ ದಿನ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಸರಗಳ್ಳತನ ಮಾಡುತ್ತಿದ್ದ ಪ್ರಮೋದ್ (24) ಹಾಗೂ ವಿಶ್ವನಾಥ (26) ಎಂಬುವವರನ್ನು ಬಂಧಿಸಿರುವ ಪೊಲೀಸರು, ಅವರಿಂದ 1.05 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಮಾ.6ರಂದು ಆಂಜನೇಯ ಬಡಾವಣೆಯಲ್ಲಿ ವಾಕ್ ಮಾಡುತ್ತಿದ್ದ ಸರೋಜಮ್ಮ ಎಂಬುವವರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು, ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದೇ ದಿನ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ರಸ್ತೆ ಬಳಿ ಬಟ್ಟೆ ತೊಳೆಯುತ್ತಿದ್ದ ರೇಣುಕಮ್ಮ ಎಂಬುವವರ ಕೊರಳಲ್ಲಿದ್ದ ಬಂಗಾರದ ಗುಂಡುಗಳ ಸರವನ್ನು ಕಿತ್ತುಕೊಂಡು ಹೋಗಿದ್ದಾಗಿ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಈ ಎರಡೂ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದು, ಇವರಿಂದ 50 ಸಾವಿರ ರೂ. ಬೆಲೆ ಬಾಳುವ 1 ಬಜಾಜ್ ಪಲ್ಸರ್, 55 ಸಾವಿರರೂ. ಮೌಲ್ಯದ ಬಂಗಾರದ ಗುಡಂಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್, ಪಿಎಸ್‌ಐ ವಿಶ್ವನಾಥ್ ಜಿ.ಎನ್., ಕೆಟಿಜೆ ನಗರ ಪಿಎಸ್‌ಐ ರೇಣುಕಾ ಜಿ.ಎಂ., ಸಿಬ್ಬಂದಿಗಳಾದ ಚಂದ್ರಪ್ಪ, ಗಿರೀಶ್‌ಗೌಡ, ಶಿವಕುಮಾರ ಸಿಂಗ್ರಿಹಳ್ಳಿ, ಯೋಗಿಶ್ ನಾಯ್ಕ್, ಆನಂದ ನಾಯ್ಕ್ ಹಾಗೂ ದಕ್ಷಿಣ ಸಂಚಾರ ಸಿಬ್ಬಂದಿಗಳಾದ ಮಾರುತಿ, ಸೋಮು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿ ರಾಘವೇಂದ್ರ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!