ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ತೆರಳಿದ ದಾವಣಗೆರೆ ರಾಮಭಕ್ತರು
ದಾವಣಗೆರೆ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುವ ಭಾರತೀಯರ ನೂರಾರು ವರ್ಷಗಳ ಕನಸು ನಸಾಗಿದೆ.
ಬಾಲರಾಮನ ಮೂರ್ತಿ, ಉದ್ಘಾಟನಾ ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ನೋಡಿರುವ ಜನತೆ ಒಮ್ಮೆಯಾದರೂ ಅಯೋಧ್ಯೆಗೆ ಹೋಗಿ ಬರಬೇಕೆಂಬ ಆಸೆ ಮನದಲ್ಲಿ ಮೂಡುವುದು ಸಹಜ.
ಹೀಗಾಗಿ ಜನತೆ ಈಗಾಗಲೇ ಅಯೋಧ್ಯೆಯತ್ತ ಪ್ರಾಯಾಣ ಬೆಳೆಸುತ್ತಿದೆ. ಮತ್ತೆ ಕೆಲವರು ಸಾಲ ಮಾಡಿಯಾದರೂ ಅಯೋಧ್ಯೆಯನ್ನು ನೋಡಬೇಕು ಎಂಬ ಹಂಬಲದಲ್ಲಿದ್ದಾರೆ.
ಕಳೆದ ಒಂದು ತಿಂಗಳಲ್ಲಿ 25 ಕೋಟಿ ರೂಪಾಯಿ ಆದಾಯ ಬಂದಿರುವುದು ಜನತೆಯಲ್ಲಿ ಅಯೋಧ್ಯೆ ನೋಡಬೇಕೆಂಬ ಹಂಬಲಕ್ಕೆ ಸಾಕ್ಷಿಯಾಗಿದೆ.
ಅಂದಹಾಗೆ ಇಂದು ಚಿತ್ರದುರ್ಗ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆ ಗೆ ದಾವಣಗೆರೆಯ ಶ್ರೀರಾಮ ಭಕ್ತರು ತೆರಳಿದರು. ರೈಲಿನಲ್ಲಿ ಮಹಿಳೆಯರಿಂದ ರಾಮನ ಭಜನೆಯನ್ನೂ ಮಾಡಿದರು.