ಬೆಂಗಳೂರು–ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ

ಬೆಂಗಳೂರು–ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ

ಬೆಂಗಳೂರು: ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಬೆಂಗಳೂರು–ಮೈಸೂರು ಬಸ್ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ 15ರಿಂದ 20ರೂ. ವರೆಗೆ ಹೆಚ್ಚಳ ಮಾಡಿದೆ.

ಟೋಲ್ ಶುಲ್ಕ ಸರಿದೂಗಿಸಲು ಕರ್ನಾಟಕ ಸಾರಿಗೆ ಬಸ್‌ ಪ್ರಯಾಣ ದರದಲ್ಲಿ 15, ರಾಜಹಂಸ ಬಸ್‌ ಪ್ರಯಾಣ ದರದಲ್ಲಿ 18, ಐರಾವತ ಸೇರಿ ಮಲ್ಟಿ ಆಕ್ಸೆಲ್ ಬಸ್‌ಗಳ ಪ್ರಯಾಣ ದರದಲ್ಲಿ 20 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ಎಕ್ಸ್‌ಪ್ರೆಸ್ ಹೈವೆಯಲ್ಲಿ ಪ್ರಯಾಣಿಸುವ ಬಸ್‌ಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಎಕ್ಸ್‌ಪ್ರೆಸ್‌ ವೇನ ಮೊದಲ ಹಂತದ ಬೆಂಗಳೂರು–ನಿಡಘಟ್ಟ ನಡುವಿನ ಕಣಿಮಿಣಿಕೆ ಟೋಲ್ ಮೂಲಕ ಸಂಚರಿಸುವ ಬಸ್‌ಗಳಿಂದ ಮಾರ್ಚ್ 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದೆ.  ಖಾಸಗಿ ಬಸ್ಸುಗಳ ದರಗಳೂ ಹೆಚ್ಚಳವಾಗಿವೆ.

Leave a Reply

Your email address will not be published. Required fields are marked *

error: Content is protected !!