ನಂಬಿಕೆ ಹವ್ಯಾಸ ಸಾಮರ್ಥ್ಯ ಇವು ವಿದ್ಯಾರ್ಥಿಗಳ ಯಶಸ್ಸಿನ ಆಧಾರಗಳು.

ದಾವಣಗೆರೆ : ಯಾವುದೇ ಯಶಸ್ಸು ನಿರ್ಧಾರವಾಗುವುದು ನಿಮ್ಮ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ. ಯಶಸ್ಸು ಅನ್ನುವುದು ಯಾವುದು ನಮ್ಮ ಕೈಯಿಂದ ಸಾಧ್ಯವಿಲ್ಲವೋ ಅದನ್ನು ಸಾಧಿಸಿ ತೋರಿಸುವುದೇ ಯಶಸ್ಸು ಎಂದು ಸತ್ಯಸಾಯಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಲಹೆಗಾರರು ಹಾಗೂ ತರಭೇತುದಾರರೂ ಆದ ಜಗನ್ನಾಥ ನಾಡಿಗೇರ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಇಂದು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾಚೇತನ ಪಿ ಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ “ವಿದ್ಯಾರ್ಥಿ ಜೀವನದ ಯಶಸ್ಸು” ವಿಷಯದ ಕುರಿತು ಉಪನ್ಯಾಸ ನೀಡಿದರು.


ಜಗತ್ತಿನಲ್ಲಿ ಯಾವುದು ಉಚಿತವಾಗಿ ಸಿಗುವುದಿಲ್ಲ. ಯಾವುದು ಉಚಿತವಾಗಿ ಸಿಗುತ್ತದೆಯೋ ಅದು ಖಚಿತವಲ್ಲ
ಹಾಗೇ ಯಶಸ್ಸು ಯಾವುದೇ ಪರಿಶ್ರಮವಿಲ್ಲದೆ ಸಿಕ್ಕರೆ ಅದು ಖಚಿತವಾಗಿರುವುದಿಲ್ಲ. ಯಾವ ವಿದ್ಯಾರ್ಥಿಯಲ್ಲಿ ಸಾಮರ್ಥ್ಯ ವಿರುತ್ತದೆಯೋ ಆ ವಿದ್ಯಾರ್ಥಿ ಯಶಸ್ಸು ಗಳಿಸುತ್ತಾನೆ. ಹಾಗೂ ವಿದ್ಯಾರ್ಥಿ ಗಳು ಆರೋಗ್ಯಕರವಾದ ಹವ್ಯಾಸಗಳನ್ನು ರೂಢಿಸಿಕೊಳ್ಳ ಬೇಕು ಅದೂ ಯಶಸ್ಸಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಗರದ ಬಿಐಇಟಿ ಕಾಲೇಜಿನ ನಿರ್ದೇಶಕರಾದ ಹಾಗೂ ದತ್ತಿದಾನಿಗಳಾದ ವೈ ವೃಷಬೇಂದ್ರಪ್ಪ ನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ದೇವಸ್ಥಾನಗಳನ್ನು ಉಳಿಸಿ ಬೆಳೆಸುವಲ್ಲಿ ಮೊದಲು ದತ್ತಿ ಬಳಕೆಯಾಯಿತು. ಭಾರತ ಮತ್ತು ಕರ್ನಾಟಕದ ಇತಿಹಾಸದಲ್ಲಿ ದತ್ತಿಗಳು ಬಹಳ ಪ್ರಮುಖ ಪಾತ್ರ ವಹಿಸಿವೆ. ಕೆಲವರು ಶಿಕ್ಷಣ ಕ್ಷೇತ್ರದಲ್ಲೂ ದತ್ತಿಗಳನ್ನು ಸ್ಥಾಪಿಸಿ ನೇರವಾಗಿದ್ದಾರೆ. ಹಾಗೇ ಕನ್ನಡ ಸಾಹಿತ್ಯ ಪರಿಷತಿನಲ್ಲೂ ಕಾರ್ಯಕ್ರಮ ಆಯೋಜಿಸುವಲ್ಲಿ ಈ ದತ್ತಿ ಗಳು ನೇರವಾಗಿವೆ ಎಂದು ತಿಳಿಸಿದರು.
ತಾಲ್ಲೂಕು ಕ ಸಾ ಪ ನಿರ್ದೇಶಕರಾದ ಶ್ರೀಮತಿ ಬಿ ವಿ ಪರಿಮಳ ಜಗದೀಶ್ ರವರು ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಚೇತನ ಪಿ ಯು ಕಾಲೇಜಿನ ಪ್ರಾಚಾರ್ಯರಾದ ಎಚ್ ಎನ್ ಪ್ರದೀಪ್ ರವರು ವಹಿಸಿದ್ದರು.


ತಾಲ್ಲೂಕು ಕ ಸಾ ಪ ಅಧ್ಯಕ್ಷೆ ಸುಮತಿ ಜಯಪ್ಪ ಪ್ರಾಸ್ತವಿಕ ನುಡಿಗಳನ್ನಾಡಿದರು.ಮತ್ತೊರ್ವ ದತ್ತಿದಾನಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ದ ನಿರ್ದೇಶಕರಾದ ಸಿ ಜಿ ಜಗದೀಶ್ ಕೂಲಂಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲ್ಲೂಕು ಕ ಸಾ ಪ ನಿರ್ದೇಶಕರಾದ ಷಡಕ್ಷರಪ್ಪ ಎಂ ಬೇತೂರು, ಮಮತಾ ರುದ್ರಮುನಿ ಮತ್ತು ಕಾಲೇಜಿನ ಉಪನ್ಯಾಸಕ ವರ್ಗದವರು ಭಾಗವಹಿಸಿದ್ದರು.
ಕು. ಎನ್ ಕೆ ಶ್ರೇಯ ಮತ್ತುಹೆಚ್ ಎ ಸಂಜನಾ ಪ್ರಾರ್ಥಿಸಿದರು, ಕು ಅಭಿಜ್ಞಾ ಸ್ವಾಗತಿಸಿದರು. ವಿದ್ಯಾರ್ಥಿ ರಿಷಿತ್ ಕುಮಾರ್ ನಿರೂಪಿಸಿದರೆ ಎಂ ಎನ್ ಇಂಚರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!