bescom; ಬೆಸ್ಕಾಂ ವ್ಯಾಪ್ತಿಯಲ್ಲಿ 15 ಸಾವಿರ ಅಪಾಯಕಾರಿ ವಿದ್ಯುತ್ ಪೂರೈಕೆ ಸ್ಥಳಗಳ ಗುರುತು – ಬೆಸ್ಕಾಂ ಎಂ ಡಿ ಮಹಾಂತೇಶ್ ಭೀಳಗಿ

ದಾವಣಗೆರೆ: ಬೆಂಗಳೂರಿನಲ್ಲಿ ತುಂಡಾದ ವಿದ್ಯುತ್ ತಂತಿ ತುಳಿದು ಸಾವಿಗೀಡಾದ ಮಹಿಳೆ ಮತ್ತು ಮಗುವಿನ ಸಾವಿನ ದುರಂತದ ನಂತರ ರಾಜ್ಯದಲ್ಲಿ ಬೆಸ್ಕಾಂ ವ್ಯಾಪ್ತಿಯ 15 ಸಾವಿರಕ್ಕೂ ಅಧಿಕ ಅಪಾಯಕಾರಿ ವಿದ್ಯುತ್ ಸರಬರಾಜು ಸ್ಥಳಗಳನ್ನು ಗುರುತಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದರು.

ದಾವಣಗೆರೆಯಲ್ಲಿಂದು ನಡೆದ ಬೆಸ್ಕಾಂ ಕುಂದುಕೊರತೆ ಸಭೆಯಲ್ಲಿ ವಿದ್ಯುತ್ ಅಪಘಾತಗಳ ಕುರಿತು ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ತಾಯಿ ಮಗುವಿನ ದುರಂತ ಸಾವನ್ನು ಸರ್ಕಾರ ಹಾಗೂ ಬೆಸ್ಕಾಂ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದರು.

ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಅಪಾಯಕಾರಿಯಾಗಿರುವ 15 ಸಾವಿರಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮಹಾಂತೇಶ ಬೀಳಗಿ ಹೇಳಿದರು.

ಇದೀಗ ರೈತರ ಕೃಷಿ ಪಂಪ್ ಸೆಟ್ ಗಳಿಗೆ ನೀಡುತ್ತಿರುವ 7 ಗಂಟೆ ನಿರಂತರ ವಿದ್ಯುತ್ ಪೂರೈಕೆಯ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ.ಬೇಸಿಗೆ ದಿನಗಳಲ್ಲಿ ಕೂಡ ಇದೇ ಅವಧಿಯ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಡಿ.ಜಿ.ಶಾಂತನಗೌಡ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!