bhadra water; ಭದ್ರಾ ನಾಲೆಗೆ ನೀರು ಹರಿಸಲು ಒತ್ತಾಯಿಸಿ ಮನವಿ
ದಾವಣಗೆರೆ, ಸೆ.05; ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಭದ್ರಾ ನಾಲೆಗೆ ನೀರು ಹರಿಸುವಂತೆ (bhadra water) ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ರೈತ ಸಂಘದ ವತಿಯಿಂದ ಹರಿಹರದ ಶಾಸಕ ಬಿ.ಪಿ ಹರೀಶ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕ ಅಧ್ಯಕ್ಷರಾದ ಎಚ್ ಬಿ ಬಸವರಾಜಪ್ಪ ಹಲಸಬಳು, ರೈತ ಸಂಘದ ಜಿಲ್ಲಾಧ್ಯಕ್ಷರಾದ ಹಾಳುರು ನಾಗರಾಜಪ್ಪನವರು, ಮುಖಂಡರಾದ ಹೆಚ್.ಸಿ ತಿಪ್ಪೇಸ್ವಾಮಿ, ಕೆ ಜಿ ನಾರಪ್ಪ ವಿಜಯ್ ಕುಮಾರ್, ಸಂಗಪ್ಪ, ಕೆ ಪಿ ವಿಜಯ್ ,ಜಿ ರಂಗನಗೌಡ, ಟಿ ನಾಗಪ್ಪ ಗುತ್ತೂರ್, ಎ ಕೆ ಜಮಲಪ್ಪ, ಕೆ ಚಂದ್ರಪ್ಪ, ಕೆ.ಎಚ್ ಮಲ್ಲಿಕಾರ್ಜುನಪ್ಪ ಹಾಗೂ ಮುಖಂಡರು ಹಾಜರಿದ್ದರು.