ವಂಚನೆಯಾಗಿದ್ದ ಮೆಕ್ಕೆಜೋಳ ಹಣವನ್ನ ರೈತರಿಗೆ ವಾಪಾಸ್ ನೀಡಿದ ಸಚಿವ ಭೈರತಿ ಬಸವರಾಜ್

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ರೈತರು ಮೆಕ್ಕೆಜೋಳ ಬೆಳೆಗಳನ್ನು ಬೆಳೆದಿದ್ದರು. ಅದನ್ನು ಹೊರ ರಾಜ್ಯದ ಕೆಲ ಮಧ್ಯವರ್ತಿಗಳು/ ದಳ್ಳಾಳಿಗಳು ಖರೀದಿಸಿ ಅಲ್ಪಸ್ವಲ್ಪ ಹಣವನ್ನು ರೈತರಿಗೆ ನೀಡಿ, ಪೂರ್ಣ ಹಣವನ್ನು ಊರಿನಿಂದ ತಂದು‌ ನೀಡುವುದಾಗಿ ಹೇಳಿ ಮೋಸ ಮಾಡಿದ್ದರು.

ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಅವರು ‌ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ರೈತರು ದೂರು ನೀಡಿ ತಮ್ಮ ಅಳಲನ್ನು ತೊಡಗಿಕೊಂಡಿದ್ದರು.

ರೈತರ ಮನವಿಗೆ ಸ್ಪಂದಿಸಿದ ಶ್ರೀ ಬಸವರಾಜ ಅವರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಅವರಿಗೆ ಸೂಚನೆ ನೀಡಿ,‌ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಭರವಸೆ ನೀಡಿದ್ದರು.

ಪೊಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಅವರು ವಿಶೇಷ ತಂಡದ ರಚಿಸಿ ದಳ್ಳಾಳಿಗಳು, ಮಧ್ಯವರ್ತಿಗಳನ್ನು ಪತ್ತೆ ಹಚ್ಚಿ ,ಕಾನೂನಿನ ರೀತಿಯಲ್ಲಿ ರೈತರಿಗೆ ಹಣ ಕೂಡಿಸುವ ಕೆಲಸ ಮಾಡಿದರು.

ಕೊರೊನಾ ಸೋಂಕು ನಿಯಂತ್ರಣ ಸಭೆ ನಡೆಸಲು ದಾವಣಗೆರೆಗೆ ಸಚಿವರಾದ ಶ್ರೀ ಬಸವರಾಜ ಅವರು ದಿನಾಂಕ ‌13-1-2022 ರಂದು ತೆರಳಿದಾಗ ರೈತರಿಗೆ ಸೇರಬೇಕಾದ ಹಣದಲ್ಲಿ ಸುಮಾರು ‌ಎರಡು ಕೋಟಿ ‌ಅರವತ್ತು ಲಕ್ಷ ರೂಪಾಯಿಗಳನ್ನು ಕೊಡಿಸಿದರು.

ಉಳಿದ ಮೊತ್ತವನ್ನು ದಳ್ಳಾಳಿಗಳಿಂದ ಕೊಡಿಸುವುದಾಗಿ ತಿಳಿಸಿದರು. ಬೈರತಿ ಬಸವರಾಜ ಅವರ ರೈತ ಪರ ಕಾಳಜಿ ಮತ್ತು ಜನಪರ ಬದ್ಧತೆಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!