ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿ ದರ್ಶನ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ :ಒಂದೇ ಮನೆಗೆ ಮೂರು ಅಧಿಕಾರ ಅಂದರೆ ಜನ ಒಪ್ಪೋದಿಲ್ಲ – ಜಿ.ಎಂ.ಸಿದ್ದೇಶ್ವರ್

ದಾವಣಗೆರೆ ನಗರದ ದೇವತೆ ದುರ್ಗಾಂಬಿಕಾ ದೇವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ದಂಪತಿ ಸಮೇತ ಆಗಮಿಸಿ ದೇವರ ದರ್ಶನ ಪಡೆದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ದೇವಿಯ ಆಶೀರ್ವಾದ ಇದೆ, ಗಾಯತ್ರಿ ಸಿದ್ದೇಶ್ವರ್ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ,

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗ್ತಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.

ದಾವಣಗೆರೆಯಲ್ಲಿ ರೇಣುಕಾಚಾರ್ಯ ಅಂಡ್ ಟೀಂ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಗಾಯತ್ರಿ ಸಿದ್ದೇಶ್ವರ್

ಎಲ್ಲಿಯೂ ವಿರೋಧ ಇಲ್ಲ, ಅವರು ಟಿಕೆಟ್ ಕೇಳಿದರು,, ಸಿಕ್ಕಿಲ್ಲ ಸಹಜವಾಗಿಯೇ ಅವರಿಗೆ ಬೇಜಾರ್ ಆಗಿದೆ.

ಅವರೆಲ್ಲರನ್ನೂ ನಾನು ಅಣ್ಣ ಎಂದೇ ಮಾತಾಡಿಸುತ್ತಿದ್ದೆ, ಎಲ್ಲರನ್ನೂ ಭೇಟಿಯಾಗಿ ಮಾತಾಡಿದ್ದೇನೆ

, ಎಲ್ಲರೂ ಖುಷಿಯಾಗಿಯೇ ಇದ್ದಾರೆ, ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ, ಎಲ್ಲವೂ ಸರಿ ಆಗುತ್ತೆ ಎಂದ ಗಾಯತ್ರಿ ಸಿದ್ದೇಶ್ವರ್

ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿದೆ, 33 % ಮೀಸಲಾತಿ ಸಿಕ್ಕಿರೋದು ಖುಷಿ ತಂದಿದೆ

.

ಮೋದಿ ಜೀ ಅವರ ಆಶೀರ್ವಾದ ಸಿಕ್ಕಿದ್ದು, ಕೇಂದ್ರದ, ರಾಜ್ಯದ ನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ

. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳುತ್ತೇನೆ, ಎಲ್ಲರಿಗೂ ನ್ಯಾಯಯುತವಾಗಿ ಸೇವೆ ಸಲ್ಲಿಸುತ್ತೇನೆ

, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ

ಮತ್ತು ಕಾರ್ಯಕರ್ತರು ಈ ಬಾರಿ ನನ್ನ ಕೈ ಹಿಡಿಯುತ್ತಾರೆ, ಕಮಲ ತೆಗೆದುಕೊಂಡು ಹೋಗಿ ಮೋದಿ ಜೀಗೆ ಅರ್ಪಿಸುತ್ತೇನೆ ಎಂದರು.

ಕಾಂಗ್ರೆಸ್ ನಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆ ಟಿಕೆಟ್ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿ.ಎಂ.ಸಿದ್ದೇಶ್ವರ್

ಅವರು ಶಾಮನೂರು ಫ್ಯಾಮಿಲಿಗೆ ದಾವಣಗೆರೆಯ ಎಲ್ಲ ಅಧಿಕಾರ ಬೇಕು, ಈಗಾಗಲೇ ಇಬ್ಬರು ಅಧಿಕಾರದಲ್ಲಿದ್ದಾರೆ

, ಯಾರಾದರೂ ಸಾಮಾನ್ಯ ಕಾರ್ಯಕರ್ತನಿಗೆ ಕೊಡಬಹುದಿತ್ತು, ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟಿದ್ದಾರೆ

. ಜನ ದಡ್ಡರಲ್ಲ, ಒಂದೇ ಮನೆಗೆ ಮೂರು ಅಧಿಕಾರ ಏಕೆ ಅಂತ ಯೋಚನೆ ಮಾಡ್ತಾರೆ.

ನಮ್ಮ ಮನೆಲೀ ಯಾರೂ ಅಧಿಕಾರದಲ್ಲಿ ಇಲ್ಲ, ಜಿ.ಎಂ.ಸೊಸೆ ಮಾತ್ರ ಸ್ಪರ್ಧಿಸಿರೋದು ಅಂತ ಜನ ಬೆಂಬಲ ನೀಡ್ತಿದ್ದಾರೆ
ಎಂದರು. ರೇಣುಕಾಚಾರ್ಯ ಅಂಡ್ ಟೀಂನ ಸ್ಪರ್ಧೆ ಎಂಬ ಪತ್ರಕರ್ತರ ಪ್ರಶ್ನೆಗೆ ಜಿ.ಎಂ.ಸಿದ್ದೇಶ್ವರ್ ರವರು

ಕರುಣಾಕರರೆಡ್ಡಿ ನಮ್ಮ ಸ್ನೇಹಿತರು, ರವೀಂದ್ರನಾಥ ಹಿರಿಯರು, ಮಾರ್ಗದರ್ಶಕರು, ಮಾಡಾಳ್ ವಿರೂಪಾಕ್ಷಪ್ಪ, ರೇಣುಕಾಚಾರ್ಯ ಸೇರಿದಂತೆ ಎಲ್ಲರೂ ನನ್ನ ಮಿತ್ರರು,

ಎಲ್ಲರೂ ನಮಗೆ ಬೆಂಬಲ ನೀಡ್ತಾರೆ. ನನ್ನ ಪತ್ನಿ ಎಲ್ಲರನ್ನೂ ಭೇಟಿಯಾಗಿ ಮಾತಾಡಿದ್ದಾರೆ

ಎಲ್ಲವೂ ಸರಿ ಹೋಗತ್ತೆ, ನಾವು ಗೆಲ್ಲುತ್ತೆವೆ ಎಂದು ಸಂಸದ ಜಿ.ಎಂ.ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಎಂಬ ಪತ್ರಕರ್ತರ ಪ್ರಶ್ನೆಗೆ ,ಪ್ರತಿಕ್ರಿಯೆ ಗಾಯತ್ರಿ ಸಿದ್ದೇಶ್ವರ್ ಅವರು

 

ಮೋದಿ ಜೀ ವಿಶ್ವನಾಯಕ, ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಅನ್ನೋದು ಕಾರ್ಯಕರ್ತರ, ಮತದಾರರ ಆಶಯ

. ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರು 20 ವರ್ಷಗಳ ಕಾಲ ಮಾಡಿರೋ ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದೇವೆ

. ನಮ್ಮ ಮಾವ ಮಲ್ಲಿಕಾರ್ಜುನಪ್ಪ ಅವರು ಒಬ್ಬ ಎಂ.ಪಿ. ಹೇಗೆ ಜನರ ಕೈಗಿ ಸಿಗುತ್ತಾರೆ ಅನ್ನೊದನ್ನ ತೊರಿಸಿಕೊಟ್ಟಿದ್ದರು. ‌

ನಾನೂ ಕಾರ್ಯಕರ್ತರಿಗೆ ಸ್ಪಂದಿಸಿದ್ದೇನೆ, ಹೋದ ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಇದೆ,

ಎಲ್ಲರೂ ಖುಷಿಯಿಂದ ಬೆಂಬಲ ನೀಡುತ್ತಿದ್ದಾರೆ ಎಂದರು.

 

 

Leave a Reply

Your email address will not be published. Required fields are marked *

error: Content is protected !!