‘ಡಿಕೆ ಮೇಕೆದಾಟು ದಾಟಲಿಲ್ಲ, ಮೇಕೆಯಾದರೂ ದಾಟಲಿ’ ಟ್ವಿಟರ್ ನಲ್ಲಿ ಬಿಜೆಪಿ ವ್ಯಂಗ್ಯ

ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಕಮಲ‌ ಪಾಳಯ ತೀವ್ರ ಕಿಡಿಕಾರಿದೆ.

ಈ ನಡುವೆ, ಪಾದಯಾತ್ರೆಗೂ ಮುನ್ನ ಕಾವೇರಿಗೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಾರಿಬಿದ್ದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ನಗೆಪಾಟಲಿಗೆ ಗುರಿಯಾಗಿದ್ದು, ನೆಟ್ಟಿಗರು ಬೆಳ್ಳಂಬೆಳಿಗ್ಗೆಯೇ ಬಂಡೆ ವಾಲುಡುತ್ತಿದೆಯಲ್ಲ ಎಂಬ ಹತ್ತಾರು ರೀತಿಯ ವ್ಯಂಗ್ಯಗಳನ್ನು ಕಮೆಂಟ್ ಮಾಡಿದ್ದಾರೆ.

ಈ ಕುರಿತ ವೀಡಿಯೋವನ್ನು ಬಿಜೆಪಿ ವೈರಲ್ ಮಾಡಿದೆ. ‘ಡಿಕೆ ಮೇಕೆದಾಟು ದಾಟಲಿಲ್ಲ, ಮೇಕೆಯಾದರೂ ದಾಟಲಿ’ ಎಂದು ವ್ಯಂಗ್ಯವಾಗಿ ಬಿಜೆಪಿ ಟ್ವೀಟ್ ಮಾಡಿದೆ.

Leave a Reply

Your email address will not be published. Required fields are marked *

error: Content is protected !!