bjp; ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ: ಎಂ.ಪಿ ರೇಣುಕಾಚಾರ್ಯ

ದಾವಣಗೆರೆ, ಅ.24: ರಾಜ್ಯದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಬಿ.ಎಸ್.ವೈ ನೇತೃತ್ವದಲ್ಲಿ ಹೋಗಬೇಕು. ಅವರ ಹಾಗೆ ಜಾತ್ಯಾತೀತ ಮತ್ತು ಸಮರ್ಥ ನಾಯಕ ಬೇಕು. ಬಿಜೆಪಿಯಲ್ಲಿ  (bjp) ಅವರೊಬ್ಬರಿದ್ದರೆ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರು ಬರುತ್ತಾರೆ ಎಂದು ವಿಜಯದಶಮಿ ದಿನದಂದು ಎಂ.ಪಿ ರೇಣುಕಾಚಾರ್ಯ ಅವರು ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಚುನಾವಣೆ ವೇಳೆ ಹೊಸ ಮುಖಗಳಿಗೆ ಅವಕಾಶಗಳನ್ನು ನೀಡಲಾಯಿತು. ಹಳಬರ ಕಾಲು ಏನಾದ್ರೂ ಬಿದ್ದು ಹೋಗಿದ್ವ? ಒಳಮೀಸಲಾತಿ ಅವಶ್ಯಕತೆ ಏನಿತ್ತು? ಎಂದು ಕಿಡಿಕಾರಿದರು.

ಅಲ್ಲದೇ ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದು, ಅವಕಾಶ ಕೊಡಲೇ ಇಲ್ಲ. ಪಕ್ಷಕ್ಕಾಗಿ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನ ರಕ್ತದ ಪ್ರತಿ ಕಣದಲ್ಲೂ ಹಿಂದೂತ್ವ ಇದೆ. ಹಾದಿ ಬೀದಿಯಲ್ಲಿ ಹೋಗುವವರಿಗೆ ನಾನೇಕೆ ಉತ್ತರಿಸಲಿ? ಚುನಾವಣೆ ಒಂದು ವಾರದಲ್ಲಿ ಇದ್ದಾಗ ಹಳೆ ಕಾರ್ಯಕರ್ತರಿಗೆ ಅವಕಾಶ ನೀಡದೆ, ಹೊಸಬರಿಗೆ ಕೊಡುವ ಪ್ರಯತ್ನ ಮಾಡಿದರು ಎಂದರು.

siddaramaiah; ಬರಗಾಲದ ನಡುವೆಯೂ ಜನರ ಸಂಭ್ರಮ ಸಂತೋಷ ತಂದಿದೆ: ಸಿದ್ದರಾಮಯ್ಯ

ಬಿಜೆಪಿಯಲ್ಲಿ (bjp) ಸರ್ವಾಧಿಕಾರಿ ಧೋರಣೆ ಹೋಗಬೇಕು. ಪಕ್ಷ ಸಂಘಟನೆ ಬೂತ್ ಮಟ್ಟದಿಂದ ಆಗಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಇವೆಲ್ಲವನ್ನು ನಾನು ವರ್ಷದ ಮುನ್ನವೇ ಹೇಳಬೇಕಿತ್ತು. ಬಿಎಸ್ ವೈ ಎಲ್ಲ ಸಮುದಾಯದವರಿಗೆ ಅವಕಾಶ ಕೊಟ್ಟರು. ಅವರಂತಹ ಸದೃಢ ನಾಯಕ ಬೇಕು. ಬಿಎಸ್ ವೈರನ್ನು ಬದಲಾವಣೆ ಮಾಡೋದು ಬೇಡವೆಂದು ಆವತ್ತು ಒತ್ತಡ ಹಾಕಿದ್ವಿ. ಆದರೆ ಕೆಲ ನಾಯಕರು ಬಿಎಸ್ ವೈ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುನಃ ಸಂಸದರ ಮೇಲೆ ಮುಗಿಬಿದ್ದ ಅವರು, ಪಕ್ಷದಲ್ಲಿ ಅವರಿಗಿಂತ ಹಿರಿಯನಾದರೂ, ವಯಸ್ಸಿನಲ್ಲಿ ಅವರು ನನಗಿಂತ ಹಿರಿಯರಾದ ಕಾರಣ ಅವರ ಮೇಲೆ ನನಗೆ ಅಪಾರ ಗೌರವವಿದೆ ಎಂದರು.

ಓಡಾಟ ನನಗೇನು ಹೊಸದಲ್ಲ. ಇಡೀ ರಾಜ್ಯಾದ್ಯಂತ ನಾನು ಪ್ರವಾಸ ಮಾಡ್ತಾ ಇದ್ದೇನೆ. ಇನ್ನೂ ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷ ಆಗುವ ಕುರಿತು ವಿವರ ನೀಡಿದ ಅವರು, ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆ ಮೋದಿ ಮತ್ತೊಮ್ಮೆ ನಮ್ಮ ದೇಶಕ್ಕೆ ಪ್ರಧಾನಿ ಆಗಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!