bsy; ಬಿಎಸ್ ವೈ ನಾಯಕತ್ವವಿದ್ದರೆ ಮಾತ್ರ ಬಿಜೆಪಿಗೆ ಭವಿಷ್ಯ: ರೇಣುಕಾಚಾರ್ಯ
ಹೊನ್ನಾಳಿ, ಆ. 26: ಕರ್ನಾಟಕ ರಾಜ್ಯ ಬಿಜೆಪಿ ವಿರುದ್ಧ ಪುನಃ ಗುಡುಗಿದ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ (bsy) ಅವರ ನಾಯಕತ್ವದಲ್ಲಿ ಬಿಜೆಪಿ ಪಕ್ಷ ಮುಂದುವರೆದರೆ ಮಾತ್ರ ಲೋಕಸಭೆಗೆ ಭವಿಷ್ಯವಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ನಾವಿಕನಿಲ್ಲದ ಹಡಗಿನಂತಾಗಿದೆ ಎಂದ ಅವರು, ರಾಜ್ಯ ಬಿಜೆಪಿಯನ್ನ (bjp) ಯಾರೋ ಎಲ್ಲೋ ಕುಳಿತುಕೊಂಡು ರಿಮೋಟ್ ಆಪರೇಟ್ ಮಾಡ್ತಾ ಇದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಕ್ಕೆ ಶಾಪವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಹೇಳಿದರು.
bjp; ಬಿಜೆಪಿ ಬಿಟ್ಟು ನಾನು ಹೋಗೋದಿಲ್ಲ, ಲೋಕಸಭೆಗೆ ಆಕಾಂಕ್ಷಿ
ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಿಲ್ಲ. ಜನ ನನ್ನ ಪ್ರಶ್ನೆ ಮಾಡ್ತಾ ಇದ್ದಾರೆ, ಇದೆಲ್ಲ ನನ್ನ ಮಾತಲ್ಲ ಜನರು ಮಾತನಾಡುತ್ತಿದ್ದಾರೆ. ಬಿ ಎಸ್ ವೈ ನಾಯಕತ್ವದಲ್ಲಿ ಹೋದ್ರೆ ಲೋಕಸಭೆಗೆ ಭವಿಷ್ಯವಿದೆ. ಪ್ರಧಾನಿ ಮೋದಿ, ಅಮಿತ್ ಶಾ ಟಾಲೆಸ್ಟ್ ಲೀಡರ್ ಅವರ ಬಗ್ಗೆ ನಾನು ಮಾತಾಡುತ್ತಿಲ್ಲ. ಯಾರೋ ಕಾಣದ ಕೈಗಳು ಕೆಲಸಮಾಡುತ್ತಿವೆ. ಇದೇ ರೀತಿ ಮಾಡಿದ್ರೆ ಬಿಜೆಪಿಗೆ ಹಿನ್ನೆಡೆಯಾಗುತ್ತೆ ಎಂದು ಹೇಳಿದರು.