ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ನಾಯ್ಕ ಅವರ ಪರ ರೋಡ್ ಶೋ ನಡೆಸಲು ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ದಾವಣಗೆರೆಯ ಬೆಣ್ಣೆ ದೋಸೆಯ ರುಚಿ ಸವಿದರು.
ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್‌ಗೆ ಸಂಸದ ಸಿದ್ದೇಶ್ವರ, ಎ. ಹೆಚ್. ಶಿವಯೋಗಿ ಸ್ವಾಮಿ, ವೀರೇಶ್ ಹನಗವಾಡಿ ಅವರೊಂದಿಗೆ ಆಗಮಿಸಿ, ಬೆಣ್ಣೆ ದೋಸೆ ಸೇವಿಸಿದರು.
