ಸುಳ್ಳು ಸುದ್ದಿ ಹಬ್ಬಿಸಿದ್ದ ಆರು ಯೂಟ್ಯೂಬ್ ಚಾನೆಲ್ ವಿರುದ್ದ ಕ್ರಮ ಕೈಗೊಂಡ ಕೇಂದ್ರ ಸರ್ಕಾರ
ನವದೆಹಲಿ: ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ.
ಈ ಯೂಟ್ಯೂಬ್ ಚಾನೆಲ್‌ಗಳು ಚುನಾವಣೆ, ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನಲ್ಲಿನ ಕಲಾಪಗಳು ಮತ್ತು ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅವುಗಳಲ್ಲಿನ ವಿಡಿಯೊಗಳು 51 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಮಾಹಿತಿ ಬ್ಯೂರೋದ (PIB) ‘ಫ್ಯಾಕ್ಟ್ ಚೆಕ್’ ಘಟಕ ತಿಳಿಸಿದೆ.
ಪಿಐಬಿಯ ಫ್ಯಾಕ್ಟ್ ಚೆಕ್ ಘಟಕದ ಪರಿಶೀಲನೆ ನಂತರ, ‘ಸಂವಾದ್ ಸಮಾಚಾರ್’, ‘ಸಂವಾದ್ ಟಿವಿ’ ಮತ್ತು ‘ನೇಷನ್ ಚಾನೆಲ್’ಗಳು ತಮ್ಮ ಹೆಸರುಗಳನ್ನು ಕ್ರಮವಾಗಿ ‘ಇನ್‌ಸೈಡ್ ಇಂಡಿಯಾ’, ‘ಇನ್‌ಸೈಡ್ ಭಾರತ್’ ಮತ್ತು ‘ನೇಷನ್ ವೀಕ್ಲಿ’ ಎಂದು ಬದಲಾಯಿಸಿಕೊಂಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇಷನ್ ಟಿವಿ – 5.57 ಲಕ್ಷಕ್ಕೂ ಹೆಚ್ಚು ಚಂದಾದಾರರು, ಸಂವಾದ್ ಟಿವಿ – 10.9 ಲಕ್ಷ ಚಂದಾದಾರರು, ಸರೋಕರ್ ಭಾರತ್ – 21,100 ಚಂದಾದಾರರು, ನೇಷನ್ 24 – 25,400 ಚಂದಾದಾರರು, ಸ್ವರ್ಣಿಮ್ ಭಾರತ್ – 6,070 ಚಂದಾದಾರರು, ಸಂವಾದ್ ಸಮಾಚಾರ್– 3.48 ಲಕ್ಷ ಚಂದಾದಾರರನ್ನು ಹೊಂದಿದ್ದವು.