ಮಹಿಳಾ ಉದ್ಯೋಗಿಗಳಿಗೆ ಋತುಸ್ರಾವ ಸಮಯದಲ್ಲಿ 2 ದಿನ ಮುಟ್ಟಿನ ರಜೆ ನೀಡುವಂತೆ ಚಂದ್ರಶೇಖರ್ ಪತ್ರ

ದಾವಣಗೆರೆ: ಸರ್ಕಾರಿ, ಅರೆಸರ್ಕಾರಿ, ಸಂಘಸಂಸ್ಥೆ ಮತ್ತು ಖಾಸಗಿ ಕಂಪನಿಗಳಲ್ಲಿ ದುಡಿಯುವ ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮಯದಲ್ಲಿ ಸಾಮಾನ್ಯ ರಜೆಯ ಹೊರತಾಗಿ 2 ದಿನ ಮುಟ್ಟಿನ ರಜೆಯನ್ನು ನೀಡುವಂತೆ ಚಂದ್ರಶೇಖರ್ ಚನ್ನಗಿರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಜೂನ್ 4ರಂದು ಮನವಿ ಸಲ್ಲಿಸಿದ್ದಾರೆ.

ಇಂಡೋನೇಷಿಯಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಆಫ್ರಿಕಾ, ಆಗ್ನೇಯ ಏಷ್ಯಾ ಮುಂತಾದ ದೇಶಗಳಲ್ಲಿ ದುಡಿಯುವ ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮಯದಲ್ಲಿ ಮುಟ್ಟಿನ ರಜಾ ಸೌಲಭ್ಯವನ್ನು ಅನುಷ್ಠಾನಗೊಳಿಸಿದೆ. ಭಾರತದಲ್ಲಿ 1992ರಲ್ಲಿ ಬಿಹಾರ್ ರಾಜ್ಯ ಸರ್ಕಾರ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ತಮ್ಮ ಸಾಮಾನ್ಯ ರಜೆಯ ಹೊರತಾಗಿ ಪ್ರತಿ ತಿಂಗಳು 2 ಸತತ ರಜೆ ಪಡೆಯುವ ಹಕ್ಕಿದೆ ಎಂದು ಘೋಷಿಸಿದೆ. 2017ರಲ್ಲಿ ಅರುಣಾಚಲ ಪ್ರದೇಶದ ಸಂಸದ ನಿನೋಂಗ್ ಎರಿಂಗ್ ಅವರು ಸಂಸತ್ತಿನಲ್ಲಿ ದಿ ಮೆಸ್ಟ್ರುಯೇಷನ್ ಬೆನಿಫಿಟ್ ಬಿಲ್ -2017 ಎಂಬ ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ. ಇದರ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಪ್ರತಿ ತಿಂಗಳು 2 ದಿನಗಳ ಋತು ಚಕ್ರದ ರಜೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ. ಹಾಗಾಗಿ ಕರ್ನಾಟಕ ರಾಜ್ಯದಲ್ಲಿಯೂ ಸಹ ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಘ-ಸಂಸ್ಥೆಗಳಲ್ಲಿ ದುಡಿಯುವ ಮಹಿಳೆಯರಿಗೆ ಸಾಮಾನ್ಯ ರಜೆಯ ಹೊರತಾಗಿ ಪ್ರತಿ ತಿಂಗಳಲ್ಲಿ ಸತತ 2 ದಿನ ಮುಟ್ಟಿನ ರಜಾ ಸೌಲಭ್ಯವನ್ನು ಅನುಷ್ಠಾನಗೊಳಿಸುವಲ್ಲಿ ಕ್ರಮಕೈಗೊಳ್ಳಬೇಕೆಂದು ವಿನಂತಿಸಿ ಪತ್ರ ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!