ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್
ವೆಲ್ಲಿಂಗ್ಟನ್: ಕ್ರಿಸ್ ಹಿಪ್ಕಿನ್ಸ್ ಅವರು ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ಲೇಬರ್ ಪಕ್ಷದ ಮೂಲಗಳು ಈ ವಿಷಯ ಖಚಿತ ಪಡಿಸಿದ್ದು, ದೇಶದ 41ನೇ ಪ್ರಧಾನಯಾಗಿ 44 ವರ್ಷದ ಕ್ರಿಸ್ ಹಿಪ್ಕಿನ್ಸ್ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
42 ವರ್ಷದ ಜಸಿಂಡ ಆರ್ಡರ್ನ್ ಅವರು ದಿಢೀರ್ ರಾಜೀನಾಮೆ ಘೋಷಣೆ ಮಾಡಿದ ಬಳಿಕ, ಲೇಬರ್ ಪಕ್ಷ ಹಿಪ್ಕಿನ್ಸ್ ಅವರನ್ನು ಆಯ್ಕೆ ಮಾಡಿದೆ.
ಕ್ರಿಸ್ ಹಿಪ್ಕಿನ್ಸ್ ಅವರು ಜಸಿಂಡ ಸಂಪುಟದಲ್ಲಿ ಶಿಕ್ಷಣ ಮತ್ತು ಸಾರ್ವಜನಿಕ ಸೇವಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಲಾಕ್‌ಡೌನ್ ಸಮಯದಲ್ಲಿ ಅವರ ಕಾರ್ಯನಿರ್ವಹಣೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.