ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! 17 ಕೋಟಿ 65 ಲಕ್ಷ ರೂ. ಉಳಿತಾಯ ಬಜೆಟ್

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ 2024-25ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 1765.74 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ.

2024-25ನೇ ಆರ್ಥಿಕ ವರ್ಷಕ್ಕೆ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಆದೇಶದ ಮೇರೆಗೆ ಮತ್ತು ಪಾಲಿಕೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ Budget ಅನ್ನು 17 ಕೋಟಿ 65 ಲಕ್ಷ ರೂ. ಗಳ ಉಳಿತಾಯದ ನಿರೀಕ್ಷೆಯೊಂದಿಗೆ ಬಜೆಟ್‌ನ್ನು ಮಂಗಳವಾರ ಮಂಡಿಸಿದರು.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸದ್ಯ ಇರುವ ಆರಂಭಿಕ ಶಿಲ್ಕು 5402 ಲಕ್ಷ ರೂ.ಗಳ ಜೊತೆಗೆ ರಾಜಸ್ವ ಸ್ವೀಕೃತಿಯಿಂದ 15567.40 ಲಕ್ಷ ರೂ. ಬಂಡವಾಳ ಸ್ವೀಕೃತಿಯಿಂದ 18224.75 ಲಕ್ಷ ರೂ. ಅಸಾಮಾನ್ಯ ಸ್ವೀಕೃತಿಯಿಂದ 18951 ಲಕ್ಷ ರೂ. ಸೇರಿದಂತೆ 2024-25 ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು 3500 ಲಕ್ಷ ರೂ. ಆದಾಯ ಕ್ರೂಡೀಕರಿಸುವ ನಿರೀಕ್ಷೆ ಹೊಂದಿದೆ.

ಈ ಸಂದರ್ಭದಲ್ಲಿ ಉಪಮಹಾಪೌರರು, ಆಯುಕ್ತರು, ಸ್ಥಾಯಿ ಸಮಿತಿ ಅದ್ಯಕ್ಷರು ಸೇರಿದಂತೆ ಪಾಲಿಕೆಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು

Leave a Reply

Your email address will not be published. Required fields are marked *

error: Content is protected !!