ಪಾಲಿಕೆ ಆಯುಕ್ತರಿಗೆ ಕಾಮಗಾರಿ ಗುಣಮಟ್ಟದ ಬಗ್ಗೆ ಇರುವ ಕಾಳಜಿ ಗುತ್ತಿಗೆದಾರರ ಬಗ್ಗೆಯೂ ಇರಲಿ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾರವರು ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿರುವುದು ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸಲಹೆ ನೀಡಿರುವುದು ಸ್ವಾಗತಾರ್ಹ.
ಆಯುಕ್ತರಿಗೆ ಕಾಮಗಾರಿ ಗುಣಮಟ್ಟದ ಬಗ್ಗೆ ಇರುವ ಕಾಳಜಿ, ಗುತ್ತಿಗೆದಾರರ ಬಿಲ್ ಪಾವತಿಯ ಬಗ್ಗೆ ಇರಲಿ ಎಂಬುದೇ ನೊಂದ ಗುತ್ತಿಗೆದಾರರ ಅಭಿಪ್ರಾಯವಾಗಿದೆ.
ಪಾಲಿಕೆಯಲ್ಲಿ ಗುತ್ತಿಗೆದಾರರ ಫೈಲ್ ಗಳು ಆಮೆಗತಿಯಲ್ಲಿ ಟೇಬಲ್ ನಿಂದ ಟೇಬಲ್ ಗೆ ಸಾಗುತ್ತಿದ್ದು, ತಾವು ಗುತ್ತಿಗೆದಾರರ ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಇಬ್ಬರ ಸಮ್ಮುಖದಲ್ಲಿ ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಕಮಿಷನ್ ರಹಿತ ಬಿಲ್ ಪಾವತಿಗೆ ವ್ಯವಸ್ಥೆ ಮಾಡಿದರೆ ಗುಣಮಟ್ಟದ ಕಾಮಗಾರಿಯ ಅನುಮಾನವೇ ಇರುವುದಿಲ್ಲ.
ಕೇವಲ ಗುತ್ತಿಗೆದಾರರ ಸಮಸ್ಯೆ ಒಂದೇ ಅಲ್ಲ, ಪಾಲಿಕೆಯ ಎಲ್ಲಾ ವಿಭಾಗಗಳ ಅಧಿಕಾರಿಗಳನ್ನು ಕರೆದು ಪೆಂಡಿಂಗ್ ಫೈಲ್ ಗಳ ಬಗ್ಗೆ ಮಾಹಿತಿ ಪಡೆದು ನಿರ್ದಿಷ್ಟಾವಧಿ ಒಳಗೆ ವಿಲೇವಾರಿ ಮಾಡುವ ಬಗ್ಗೆ ಹಾಗೂ ಫೈಲ್ ವಿಲೇವಾರಿ ಸಮಯ ನಿಗದಿಪಡಿಸುವ ವ್ಯವಸ್ಥೆ ಮಾಡಬೇಕಾಗಿ ಪಾಲಿಕೆ ವ್ಯಾಪ್ತಿಯ ನಾಗರೀಕರ ಪರವಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಕೆ.ಎಲ್ ಹರೀಶ್ ಬಸಾಪುರ ತಿಳಿಸಿದ್ದಾರೆ.